
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಭೀಕರ ಕುಡಿಯುವ ನೀರಿನ ಸಮಸ್ಯೆ ಇದೆ. ಈಗ ವಾರ್ಡಿಗೆ ನೀರಿನ ಸೌಲಭ್ಯ ಒದಗಿಸುವಂತೆ ಪಿ.ಡಿ.ಓ ಪಿ ಎಸ್ ನಾಯ್ಕೋಡಿ ಅವರನ್ನು ಅನೇಕ ವೇಳೆ ಭೇಟಿಯಾಗಿದ್ದು, ಮತ್ತು ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದೇವೆ. ಆದರೆ ಅವರು ಇಂದು ನಾಳೆ ನಾಡಿದ್ದು ಅಂತ ಕಾಲಹರಣ ಮಾಡಿ ನೆಪ ಒಡ್ಡುತ್ತಿದ್ದಾರೆ.ಹೊರತು ನೀರು ಒದಗಿಸುವ ಕುರಿತು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ಕಳೆದ ವರ್ಷವೇ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ನೀರಿನ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು ಅಲ್ಲದೆ ಪಿ.ಡಿ.ಓ ಅವರು ಈ ಸಮಸ್ಯೆಗೆ 14ನೇ ಹಣಕಾಸಿನಲ್ಲಿ 1 ಲಕ್ಷ ರೂಪಾಯಿ ತೆಗೆದು ಇಡಲಾಗಿದೆ ಎಂದು ಸ್ವತಃ ಶಾಸಕರೇ ಸಾರ್ವಜನಿಕವಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ದಿನ ಕಳೆದಂತೆ ನಮ್ಮ ಸಹನೆಯು ಮಿತಿ ಮೀರಿ ಹೋಗುತ್ತಿದೆ ಎಂದು ತಹಸಿಲ್ದಾರ ಜಿ.ಎಸ್ ಮಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಾರಣ ಈ ಅರ್ಜಿ ತಲುಪಿದ ಒಂದು ವಾರದೊಳಗೆ ನಮ್ಮ ವಾರ್ಡಿನ ನೀರಿನ ಸಮಸ್ಯೆ ಬಗೆಹರಿಸದೆ ಹೋದರೆ ಮುಂದಿನ ವಾರದಿಂದ ತಮ್ಮ ಕಚೇರಿಯ ಆವರಣದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ. ಎಂದು ಈ ಮೂಲಕ ವಿನಂತಿ ಪೂರ್ವಕವಾಗಿ ಕುಂಟೋಜಿ ಗ್ರಾಮದ ವಾರ್ಡ್ ನಂಬರ್ 2ರ ಜನರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಬಸಪ್ಪ ಸಜ್ಜನ,ಡಿ ಹುಸೇನ ಬಾಷಾ ಸಿದ್ದು ಬಳೂತಿ, ಯಲ್ಲಪ್ಪ ಯರಝರಿ, ಸಿಎಂ ವನರೊಟ್ಟಿ, ಎಂ ಎಂ ಬಿರಾದಾರ,ಎಂ ಎ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ:ರಾಯಲ್ ಟಿವಿ ನ್ಯೂಸ್
Published by Royal TV
Royal tv Kannada news online website channel
View more posts