ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದು ವೃತ್ತಿಯಲ್ಲಿ ಇಂಜಿನಿಯರ್ ಆದ ಗಂಗಾಮತಸ್ಥ ಸಮಾಜದ ಬಸವರಾಜ ಬಾರಕೇರ ಹಾಗೂ ರೇಖಾ ಬಾರಕೇರ ದಂಪತಿಗಳ ಇಪ್ಪತ್ತ ಐದನೇಯ ವರ್ಷದ ಮದುವೆಯ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು.
ಆಚಾರ್ಯ ಶ್ರೀನಿವಾಸ ಗಜೇಂದ್ರಗಡ ಅವರ ಮಾರ್ಗದರ್ಶನದಲ್ಲಿ ಮಂತ್ರ ಪಟನೆಯ ಮೂಲಕ ದಂಪತಿಗಳಿಗೆ ಆಶಿರ್ವದಿಸಿದರು.
ದಂಪತಿಗಳು ಪರಸ್ಪರ ಹೂವಿನ ಹಾರವನ್ನು ಹಾಕಿಕೊಳ್ಳುವ ಮೂಲಕ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.ಹಾಗೆಯೇ ಜಾನ್ಹವೀ ಪುಟಾಣಿಯ ಐದನೇಯ ವರ್ಷದ ಹುಟ್ಟು ಹಬ್ಬವನ್ನು ಈ ಸಂದರ್ಭದಲ್ಲಿ ಆಚರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹನುಮಂತ ಅಂಬಿಗೇರ, ನಿವೃತ್ತ ಪಿಎಸ್ಐ ಲಕ್ಕಪ್ಪ ಕೋಲಕಾರ, ಶಿವಪ್ಪ ಚಿಮ್ಮಲಗಿ,ನಿವೃತ್ತ ಎ ಎಸ ಐ ನಿಂಗಪ್ಪ ಕಟ್ಟಿಮನಿ, ಬಸವರಾಜ ರಾಮವಾಡಗಿ, ಸಂಗಪ್ಪ ಪ್ಯಾಟಿ,ಯಲ್ಲಪ್ಪ ಅಂಬಿಗೇರ,ಸೇರಿದಂತೆ ಮಹಿಳೆಯರು ಹಾಗೂ ಹಲವು ಸಮಾಜದ ಬಾಂಧವರು ಉಪಸ್ಥಿತರಿದ್ದರು. ಅಲ್ಲದೇ ಬಾರಕೇರ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತ ಸ್ನೇಹಿತ ವಲಯದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವದಿಸಿದರು.