ಹಳ್ಳಿ ಹುಡುಗನ ಬೆಳ್ಳಿ ಸಾಧನೆ-ರಾಷ್ಟಮಟ್ಟದ ಲಾಂಗಜಂಪ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಂದೀಪ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸಪ್ತಸಾಗರ ಸುದ್ದಿ:

ಸತತ ಪ್ರಯತ್ನವೋಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಂದೀಪ ಕುಂಬಾರ ರಾಷ್ಟ್ರಕ್ಕೆ ಚಿನ್ನದ ಪದಕ ಗೆಲ್ಲವುದರ ಮೂಲಕ ಸಾಧಿಸಿ ತೋರಿಸಿದ್ದಾನೆ.

ರೈತನ ಮಗನೊಬ್ಬ ರಾಷ್ಟ್ರಮಟ್ಟದ ಲಾಂಗ್ ಜಂಪ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದು, ಮುಂದಿನ ತಿಂಗಳು ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಸಂದೀಪ ಕುಂಬಾರ ಇತ್ತೀಚಿಗೆ ತಮಿಳುನಾಡು ತಿರುಚಿನಾಪಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾರೆ. ಮುಂದಿನ ತಿಂಗಳು 10 ರಂದು ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿ ಕುಟುಂಬ ಹಾಗೂ ಗ್ರಾಮಕ್ಕೆ ಸಂದ ಜಯ. ಇನ್ನು ಮುಂದೆ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುತ್ತಾನೆ ದೇಶದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಾನೆ ಎಂದು ಆತನ ತಂದೆ ರಾಮು ಕುಂಬಾರ ಹೇಳುತ್ತಾರೆ.

ಸಂದೀಪ್ ಅವರಿಗೆ ದೈಹಿಕ ಶಿಕ್ಷಕ ಜ್ಞಾನೇಶ್ವರ್ ಚೌಗಲಾ ಅವರು ಮಾರ್ಗದರ್ಶನ ಮಾಡಿದ್ದಾರೆ. ಯುವಕನ ಸಾಧನೆಗೆ ಸಪ್ತಸಾಗರ ಗ್ರಾಮಸ್ಥರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ಏನೇ ಆಗಲಿ ಹಳ್ಳಿ ಹುಡುಗನ ಸಾಧನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುವದು ನಮ್ಮೆಲ್ಲರ ಆಶಯ.

ವರದಿ:ಸಚೀನ ಕಾಂಬಳೆ

Published by Royal TV

Royal tv Kannada news online website channel

Leave a comment

Design a site like this with WordPress.com
Get started