ಚಾಲಕನ ನಿಯಂತ್ರಣ ತಪ್ಪಿ ರೈಲು ಸೇತುವೆಯಿಂದ ಬಿದ್ದ ಲಾರಿ ಸ್ಥಳದಲ್ಲೆ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆಯ ಸುದ್ದಿ

ಕಾಗವಾಡ ವರದಿ

ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಸೇತುವೆಯ ಮೇಲಿಂದ ಲಾರಿ ಉರುಳಿ ಬಿದ್ದು ಚಾಲಕ ಹಾಗೂ ಕ್ಲೀನರ್ ಮೃತಪಟ್ಟ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದ ಮೆಹಬೂಬ್ ಬಾದಷಹಾ ಮುಲ್ಲಾ (28) ಹಾಗೂ ಗುಳೇದಗುಡ್ಡ ತಾಲೂಕಿನ ಹಳ್ಳದೂರು ಗ್ರಾಮದ ಮುಸ್ತಫಾ ಜನಾಫ್ ಕುರಿ (20) ಮೃತ ದುರ್ದೈವಿಗಳು.

14 ಚಕ್ರದ ಬೃಹತ್ ಗಾತ್ರದ ಲಾರಿಯು ರಾಜಸ್ಥಾನದಿಂದ ಸಣ್ಣಕಲ್ಲು ತುಂಬಿಕೊಂಡು ಬಾಗಲಕೋಟೆ ಜಿಲ್ಲೆಯ ಲೋಕಾಪುರಕ್ಕೆ ತೆರಳುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ.ಉಗಾರ ರೈಲ್ವೆ ಸೇತುವೆ ಸುಮಾರು 60 ಅಡಿ ಎತ್ತರವಿದ್ದು,ಈ ಸೇತುವೆ ಮೇಲಿಂದ ಲಾರಿ ಬಿದ್ದಿರುವುದರಿಂದ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಲಾರಿ ರೈಲ್ವೆ ಹಳಿಯ ಬಿದ್ದಿರುವದರಿಂದ ಕೆಲಕಾಲ ರೈಲು ಸಂಚಾರಕ್ಕೆ ತೊಂದರೆಯಾಗಿದೆ.ಈ ಕುರಿತು ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವರದಿ:ಸಚೀನ ಕಾಂಬಳೆ

Published by Royal TV

Royal tv Kannada news online website channel

Leave a comment

Design a site like this with WordPress.com
Get started