ನಾಗಮಂಗಲದಲ್ಲಿ ಮತದಾನದ ಜಾಗ್ರತಿ ಆಂದೋಲನ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮತದಾನದ ಜಾಗ್ರತಿ ಆಂದೋಲನ ಮತದಾನದ ಮಹತ್ವದ ಅರಿವು ಪ್ರಜಾಪ್ರಭುತ್ವದಲ್ಲಿನ ನಿಲುವು ಇರಬೇಕಾದರೆ ಮತದಾರನಿಗೆ ಅರಿವು ಮೂಡಬೇಕಾಗಿರುವುದರಿಂದ ಮತದಾನದ ಜಾಗ್ರತಿ ಜಾಥ ಅಗತ್ಯವಾಗಿ ಮನಗೊಂಡು ಈ ಆಂದೋಲನ ಹಮ್ಮಿ ಕೂಳ್ಳಲಾಗಿತ್ತು.

ನಾಗಮಂಗಲ ತಾಲ್ಲೂಕು ಆಡಳಿತ. ಸ್ವೀಪ್ ನಾಗಮಂಗಲ,ನಾಗಮಂಗಲ ಪ್ರಥಮ ದರ್ಜೆ ಕಾಲೇಜ್ ಸಹಯೋಗದಲ್ಲಿ “ಮತದಾನದಿನಾಚರಣೆಯ ಪೂರ್ವ ಬಾವಿ “ಅಂಗವಾಗಿ ನಾಗಮಂಗಲದ ಪ್ರಮುಖ ಬೀದಿಗಳಲ್ಲಿ ಜಾಥ ನೆಡಸಲಾಗಿದ್ದು ಇದರೊಂದಿಗೆ ಮತದಾನದ ಅರಿವು ಮೂಡಿಸುವ ಹಾಡುಗಳನ್ನು ಕಾಲೇಜು ಮಕ್ಕಳು ನಡೆಸಿಕೊಟ್ಟರು.

ಈ ಆಂದೋಲನದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ರೂಪ ರವರು ತಾಲ್ಲೂಕು ಪಂಚಾಯಿತಿಯ ಅಧಿಕಾರಿ ಅನಂತರಾಜು,ದೈಹಿಕ ಶಿಕ್ಷಣ ಪರೀವಿಕ್ಷಕರಾದ ಶಿವಣ್ಣಗೌಡ ತೋಟಗಾರಿಕೆ ಅಧಿಕಾರಿ ಶಾಂತಮ್ಮ ಕಾಲೇಜ್ ಪ್ರೊಫೆಸರ್ ದಾನೇಗೌಡರು ಮತ್ತು ಉಪನ್ಯಾಸಕರು,ಸ್ವೀಪ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ವರದಿ:ಜಗದೀಶ ನಾಗಮಂಗಲ

Published by Royal TV

Royal tv Kannada news online website channel

Leave a comment

Design a site like this with WordPress.com
Get started