ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಾರತಿಯಾಗಿ ಡಿ.ಕೆ ಶಿವಕುಮಾರ್

ಬೆಂಗಳೂರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರನ್ನು ಹೈಕಮಾಂಡ ನೇಮಕ ಮಾಡಿದ್ದಾರೆ. ಇನ್ನೂ ಪ್ರಮುಖ ಮುಖಂಡರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ಸಲೀಂ ಅಹ್ಮದ್ ನೂತನ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.

ಸದ್ಯ ತುಂಬಾ ದಿನದಿಂದ ಜನರಲ್ಲಿ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ದಿನೇಶ ಗುಂಡೂರಾವ್ ರಾಜೀನಾಮೆ ನೀಡಿದ್ದರಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಾಲಿಯಾಗಿತ್ತು. ಈ ಸ್ಥಾನಕ್ಕೆ ಹಲವರು ಕಣ್ಣು ಇತ್ತು ಯಾರನ್ನು ನೇಮಕಮಾಡಲಾಗುತ್ತಿದೆ ಎನ್ನುವ ಕುತೂಹಲ. ಅಂತಿಮವಾಗಿ ಡಿ.ಕೆ.ಶಿವಕುಮಾರ ಅವರ ಮೇಲೆಯೆ ಪಕ್ಷ ವಿಶ್ವಾಸವಿಟ್ಟು ನಾಯಕತ್ವದ ಜವಾಬ್ದಾರಿ ವಹಿಸಿದೆ.

ಇನ್ನು ವಿರೋಧ ಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ಕಾಂಗ್ರೆಸ್ ಹೈ ಕಮಾಂಡ್ ಇನ್ನೂ ಅಂಗೀಕರಿಸಿಲ್ಲ. ಹೀಗಾಗಿ ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನೀಡಲು ನಮ್ಮನ್ನು ಸಂಪರ್ಕಿಸಿ -8792900064

Published by Royal TV

Royal tv Kannada news online website channel

2 thoughts on “ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಾರತಿಯಾಗಿ ಡಿ.ಕೆ ಶಿವಕುಮಾರ್

Leave a comment

Design a site like this with WordPress.com
Get started