ಪೋಲಿಸ್ ಪ್ರಕಟಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ:

ಈ ದಿವಸ ದಿನಾಂಕ: 06-03-2020 ರಂದು ಯಲ್ಲವ್ವ ಗಂಡ: ಅಶೋಕ ಗುಡಗುಂಟಿ ವಯಾ: 44 ವರ್ಷ, ಸಾ: ವನಹಳ್ಳಿ ಹಾ/ವ ಮುದ್ದೇಬಿಹಾಳ ಹುಡ್ಕೋ ಕಾಲೋನಿ ಇವರು ಠಾಣೆಗೆ ಬಂದು ತನ್ನ ಪಿರ್ಯಾದಿ ನೀಡಿದ್ದರಲ್ಲಿ- ತನ್ನ ಗಂಡ ಅಶೋಕ ಗುಡಗುಂಟಿ ವಯಾ: 44 ವರ್ಷ ಇವರು ದೇವರ ಬಗ್ಗೆ ಶರಣ ಸಂತರ ಬಗ್ಗೆ ಅತೀಯಾದ ನಂಬಿಕೆ ಹಾಗೂ ಶ್ರದ್ದೇ ಉಳ್ಳವರು ಆಗಿದ್ದು, ಈ ಮೊದಲು 02-03 ಸಲ ದೊಡ್ಡ-ದೊಡ್ಡ ದೇವಸ್ಥಾನಗಳಿಗೆ ಹೋಗುವದಾಗಿ ಹೇಳಿ ಹೋಗಿ 02-03 ವರ್ಷ ಬಿಟ್ಟು ಮರಳಿ ಮನೆಗೆ ಬಂದಿದ್ದು, ಹೀಗಿರುವಾಗ ಸನ್- 2014 ನೇ ಸಾಲೀನ ಗಾಂಧಿ ಜಯಂತಿಯ ದಿವಸ ಸಾಯಂಕಾಲ 04:00 ಗಂಟೆಯ ಸುಮಾರಿಗೆ ತನ್ನ ಗಂಡ ತಮ್ಮ ಬಾಡಿಗೆ ಮನೆಯಿಂದಾ ಮುದ್ದೇಬಿಹಾಳದ ಬಜಾರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ಮರಳಿ ಮನೆಗೆ ಬರಲಿಲ್ಲ. ಹೀಗಾಗಿ ಅವರು ಮತ್ತೆ ದೇವಸ್ಥಾನಗಳಿಗೆ ತಿರುಗಲಿಕ್ಕೆ ಹೋಗಿದ್ದಾರೆ ಈ ಮೊದಲಿನಂತೆ ಮರಳಿ ಮನೆಗೆ ಇಂದಲ್ಲಾ ನಾಳೇ ಬರಬಹುದು ಅಂತಾ ಅನಕೊಂಡು ಸುಮ್ಮನಿದ್ದೇನು. ತನ್ನ ಗಂಡನು ಅಂದಾಜ 5 ಫೂಟ 6 ಇಂಚ ಎತ್ತರ, ಮೈಯಿಂದ ತೆಳ್ಳಗೆ ಸದೃಡ ಮೈಕಟ್ಟು, ಸಾದಗಪ್ಪು ಬಣ್ಣ, ಉದ್ದ ಮುಖದವನು ಇರುತ್ತಾನೆ. ಕಾಣೆಯಾದ ತನ್ನ ಗಂಡನಿಗೆ ಇಲ್ಲಿಯವರೆಗೆ ತುಳಜಾಪೂರ, ಪಂಡರಪೂರ, ಧರ್ಮಸ್ಥಳ, ಮಂತ್ರಾಲಯ ಮಂಗಳೂರ, ಬೆಂಗಳೂರ, ಹುಬ್ಬಳ್ಳಿ, ಗೋವಾ ವಗೈರೆ ಕಡೆಗೆ ಹುಡುಕಾಡಿದ್ದಲ್ಲದೆ ಅವನು ಇಂದಲ್ಲಾ ನಾಳೆ ಈ ಮೊದಲಿನಂತೆ ಮನೆಗೆ ಬಂದಾನು ಅಂತಾ ಇಲ್ಲಿಯವರೆಗೆ ಕಾಯ್ದಿದ್ದು ಅವನು ಬರುವ ಯಾವುದೆ ಲಕ್ಷಣಗಳು ಕಾಣಲಾರದ ಸಲುವಾಗಿ ಈಗ ಬಂದು ಪಿರ್ಯಾದಿ ನೀಡಿದ್ದು, ಕಾರಣ ಪಿರ್ಯಾದಿ ಕೊಡಲು ತಡವಾಗಿರುತ್ತದೆ ಅಂತಾ ನಮೂದಿಸಿದ ಪಿರ್ಯಾದಿಯನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಯ ಗುನ್ನೆ ನಂಬರ: 41/2020 ಕಲಂ: ಮನಷ್ಯ ಕಾಣೆ ನೆದ್ದಕ್ಕೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕಾಣೆಯಾದ ವ್ಯಕ್ತಿಯ ವಿವರ

ಕಾಣೆಯಾದ ವ್ಯಕ್ತಿಯ ಭಾವಚಿತ್ರ ಹೆಸರು & ವಿಳಾಸ

ಅಶೋಕ ತಂದೆ: ಬಸಪ್ಪ ಗುಡಗುಂಟಿ ವಯಾ: 44 ವರ್ಷ, ಜಾತಿ: ಹಿಂದು ಬೇಡರ, ಉದ್ಯೋಗ: ಕೂಲಿ ಕೆಲಸ ಸಾ: ವನಹಳ್ಳಿ ಹಾ/ವ ಮುದ್ದೇಬಿಹಾಳ ಹುಡ್ಕೋ ಕಾಲೋನಿ

ತಂದೆಯ ಹೆಸರು

ಬಸಪ್ಪ ಗುಡಗುಂಟಿ

ಎತ್ತರ

5 ಫೂಟ 6 ಇಂಚ

ಮೈಕಟ್ಟು

ಮೈಯಿಂದ ತೆಳ್ಳಗೆ

ಉದ್ಯೋಗ

ಕೂಲಿ ಕೆಲಸ

ಮುಖ

ಉದ್ದ ಮುಖ

ಬಣ್ಣ

ಸಾದಗಪ್ಪು ಬಣ್ಣ

ಧರಿಸಿರುವ ಬಟ್ಟೆ

ನೀಲಿ ಬಣ್ಣದ ಪೂರ್ತಿ ತೋಳಿನ ಶರ್ಟ ಮತ್ತು ಕಪ್ಪು ಪ್ಯಾಂಟ

ಮಾತನಾಡುವ ಭಾಷೆ

ಕನ್ನಡ, ಹಿಂದಿ, ಕೊಂಕಣಿ, ಮರಾಠಿ.

ಈ ಮೇಲಿನ ಚಹರೆ ಉಳ್ಳ ವ್ಯಕ್ತಿಯ ಬಗ್ಗೆ ತಮ್ಮ ಠಾಣಾ ಸರಹದ್ದಿಯಲ್ಲಿ ಪತ್ತೆಯಾದಲ್ಲಿ ಆರಕ್ಷಕ ಉಪ ನಿರೀಕ್ಷಕರು ಮುದ್ದೇಬಿಹಾಳ ಪೊಲೀಸ ಠಾಣೆ, ಆರಕ್ಷಕ ವೃತ್ತ ನಿರೀಕ್ಷಕರು ಮುದ್ದೇಬಿಹಾಳ ವೃತ್ತ ಆರಕ್ಷಕ ಉಪಾಧೀಕ್ಷಕರು ಬಸವನ ಬಾಗೇವಾಡಿ ಉಪ-ವಿಭಾಗ, ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ ಜಿಲ್ಲೆ ರವರನ್ನು ಸಂಪರ್ಕಿಸಲು ಕೊರಲಾಗಿದೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು-

ಪಿ ಎಸ್ ಐ ಮುದ್ದೇಬಿಹಾಳ ಪಿಎಸ್ – 08356 – 220333

ಸಿಪಿಐ ಮುದ್ದೇಬಿಹಾಳ ವೃತ್ತ – 08356 – 220332

ಡಿವೈಎಸ್‍ಪಿ ಬ ಬಾಗೇವಾಡಿ – 08358 – 245322 ಸಹಿ/-

ಕಂಟ್ರೋಲ್ ರೂಮ್ ವಿಜಯಪೂರ – 08352 – 250844 ಸಿ.ಎಚ್.ಸಿ-1120

ಮುದ್ದೇಬಿಹಾಳ ಪಿ.ಎಸ್

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started