ಕಂಭ ಸ್ಥಾಪನೆಯಾದ 15 ದಿನಗಳ ಪೂಜಾ ಕಾರ್ಯದ ನಂತರ ಜರುಗುವ ರಥೋತ್ಸವ

ಮಂಡ್ಯ ಜಿಲ್ಲೆಯ ನಾಗಮಂಗಲ: ದೇವಾಲಯಗಳ ನಾಡು ನಾಗಮಂಗಲ ತಾಲ್ಲೂಕಿನ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ನೇರಲೆಕೆರಮ್ಮ ದೇವಿಯ ರಥೋತ್ಸವ ಮಾ.14 ರಂದು ವೈಭವದಿಂದ ಜರುಗಲಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಪಡುವಲ ನೇರಲೆಕೆರೆ ಗ್ರಾಮದಲ್ಲಿರುವ ಗ್ರಾಮ ದೇವತೆಯಾದ ನೇರಲೆಕೆರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ 15 ದಿನಗಳ ಮುಂಚೆಯೇ ಹೊಂಬಾಳೆ ತಂದು ದೇವರಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಕ್ಕೆ ತೆರಳಿ ಸಂಜೆ ವೇಳೆಗೆ ತಮಟೆ,ಡೋಲು,ವಾದ್ಯಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು ಮತ್ತು ಬೀಳ್ಗೊಡೆಯೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆಗೆ ಇಟ್ಟ ಹೊಂಬಾಳೆ ಒಡೆಯುವವರೆಗೆ ನಿರಂತರ ಪೂಜೆ ಸಲ್ಲಿಸಲಾಗುತ್ತದೆ.ಹೊಂಬಾಳೆ ಹೊಡೆದ ನಂತರ ಅದನ್ನು ಕೊಳದಲ್ಲಿ ಪೂಜೆ ಮಾಡಿ ಗ್ರಾಮದ ಮಧ್ಯೆ ಇರುವ ರಂಗದ ಹಟ್ಟಿಯಲ್ಲಿ ಸ್ಥಾಪಿಸಿ ಮಡಿಯಿಂದ ಪೂಜೆ ಸಲ್ಲಿಸುವ ಜೊತೆಗೆ ಜಾತ್ರೆಯವರೆಗೆ ಪ್ರತಿದಿನ ರಾತ್ರಿ ರಂಗ ಕುಣಿತ ಉತ್ಸವ ಜರುಗುತ್ತದೆ.
ಜಾತ್ರೆಯ ಪ್ರಾರಂಭದ ದಿನವಾದ ಮಾ.12 ರಂದು ಪಕ್ಕ ಕಡೇನಹಳ್ಳಿ ಗ್ರಾಮಸ್ಥರಿಂದ ತೇರಿಗೆ ಹಗ್ಗ ಬಿಗಿತ ,ರಥದ ಕಳಾಶಾರೋಹಣ,ವಿದ್ಯುತ್ ದೀಪಾಲಂಕಾರ,ರಂಗಕುಣಿತ ,ಕೋಲಾಟ,ವಿವಿಧ ವಿಮೋದಾವಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಮಾ.13 ರಂದು ನೇರಲೆಕೆರಮ್ಮ ದೇವಿಯ ಉಯ್ಯಾಲೋತ್ಸವ ,ಕುಂಭಾಭೀಷೇಕ ಮತ್ತು ರಥಾಲಂಕಾರ ಕಾರ್ಯಕ್ರಮಗಳು ಜರುಗುತ್ತವೆ.ರಥೋತ್ಸವದ ದಿನವಾದ ಮಾ.14ರ ಶನಿವಾರದಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ದೇವರನ್ನು ರಥದ ಮೇಲೆ ಕೂರಿಸಿ ತೇರಿಗೆ ಬಲಿಪೂಜೆ,ಎಡೆ ಪೂಜೆ ಸಲ್ಲಿಸಿ ರಥೋತ್ಸವ ಆರಂಭವಾಗುತ್ತದೆ. ಜೊತೆಗೆ ಭಕ್ತಾಧಿಗಳಿಂದ ಬಾಯಿಬೀಗ ,ಸೋಮನಕುಣಿತ, ಅರ್ಚಕರಿಂದ ಅಗ್ನಿಕೊಂಡ ಮತ್ತು ಕಡೇನಹಳ್ಳಿ ಗ್ರಾಮದಿಂದ ಮಡೆ ಆರತಿ ಬರುವ ಕಾರ್ಯಕ್ರಮಗಳ ಜೊತೆಗೆ ದೇವರ ಅಡ್ಡ ಪಲ್ಲಕ್ಕಿ ಉತ್ಸವ ಜರುಗುತ್ತದೆ.
ಅಲ್ಲದೇ ಜಾತ್ರೆಗೆ ಮಡಿಕೇರಿ, ಕೆ.ಆರ್.ನಗರ, ಕೆಆರ್.ಪೇಟೆ, ಊಟಿ, ತಮಿಳುನಾಡು,ಅರಕಲಗೋಡು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು ,ಬರುವ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಶುಕ್ರವಾರ ಮತ್ತು ಶನಿವಾರ ಅನ್ನಸಂತಾರ್ಪಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಆಯೋಜಿಸಿದ್ದಾರೆ.ಜನರು ಆಗಮಿಸಿ ದೇವರ ದರ್ಶನ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.
ನಾವು ಚಿಕ್ಕವರಿದಾಗಿನಿಂದಲೂ ನೋಡುವಂತೆ ಭಕ್ತರು ಸಮಸ್ಯೆಗಳನ್ನು ಹರಕೆ ಹೊತ್ತು ದೇವಾಲಯದ ಬಳಿ ಕುಳಿತು ಉತ್ಸವ ಮೂರ್ತಿಯನ್ನು ಅವರ ಮೇಲೆ ದಾಟಿಸಿದರೆ ಸಮಸ್ಯೆ ಶೀಘ್ರದಲ್ಲಿ ಬಗೆಹರಿದ ಉದಾಹರಣೆಗಳಿವೆ ಜೊತೆಗೆ ಚರ್ಮವರೋಗಗಳು ಸಹ ಹರಕೆ ಹೊತ್ತರೆ ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ ಎಂದು ಗ್ರಾಮದ ಯಜಮಾನ ಎನ್.ಎಂ.ನಾಗರಾಜು ಹೇಳುತ್ತಾರೆ.
ತಾಲ್ಲೂಕಿನ ಪಡುವಲ ನೇರಲೆಕೆರೆ ಗ್ರಾಮದಲ್ಲಿರುವ ನೇರಲೆಕೆರಮ್ಮ ದೇವಾಲಯ.
ರಾಯಲ್ ಟಿವಿ ನ್ಯೂಸ್- ಜಗದೀಶ ನಾಗಮಂಗಲ
ರಾಯಲ್ ಟಿವಿ ನ್ಯೂಸ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts