ಸೂರಜ್ ಸೋಶಿಯಲ್ ಗ್ರುಪ್ ವತಿಯಿಂದ ಆರಕ್ಷಕರಿಗೆ ಸೇವೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಕೊರೊನಾ ಸೋಂಕಿನ ನಿಯಂತ್ರಣ ಕಲಂ144 ನಿಷೇಧಾಜ್ಞೆ ಜಾರಿಗೊಳಿಸಿದ್ದು ಸಾರ್ವಜನಿಕರ ಸೇವೆ ಸಲ್ಲಿಸುತ್ತಿರುವ ಆರಕ್ಷಕರಿಗೆ ಸೂರಜ್ ಸೋಷಿಯಲ್ ಗ್ರೂಪ್ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಮಹೇಬೂಬ ಶ ಹಡಲಗೇರಿ, ಶ್ರೀಕಾಂತ್ ಛಲವಾದಿ, ಕಾಶೀಮ ಕುಂಟೋಜಿ ,ಲಾಲಸಾಬ ಜತ್ತಿ, ಅಬ್ದುಲಗಫುರ ಬ ಕಡಕೂಳ ,ಹಾಗು ರೇವಣ್ಣಸಿದ್ಧ.ಬ.ನಾಯಕ, ಅಬ್ದುಲವಾಜಿದ ಹಡಲಗೇರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೂರಜ್ ಸೋಷಿಯಲ್ ಗ್ರೂಪ್ ವತಿಯಿಂದ ಸಾರ್ವಜನಿಕರ ಗಮನಕ್ಕೆ ವಿಶೇಷ ಸೂಚನೆಯನ್ನು ಹೇಳಿದರು. ಸಮಯ, ಕುಟುಂಬ, ಆರೋಗ್ಯ ಲೆಕ್ಕಿಸದೇ ಧೈರ್ಯದಿಂದ ಕೊರೋನಾ ವೈರಸ್ ವಿರುದ್ಧ ಸೆಣಸುತ್ತಿರುವ ವೈದ್ಯಕೀಯ ವೃಂದ, ಪೊಲೀಸರು, ಪೌರಕಾರ್ಮಿಕರ ಪರಿಶ್ರಮವನ್ನು ಗೌರವಿಸಬೇಕು. ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುವವರೆಗೆ ಅವರ ಧೈರ್ಯ, ತ್ಯಾಗಕ್ಕೆ ಮನ್ನಣೆ ನೀಡಬೇಕು.ಹಾಗು ಸರ್ಕಾರ ಜಾರಿಗೆ ತಂದಿರುವ ನಿಯಮವನ್ನು ಪಾಲನೆ ಮಾಡಬೇಕು ಹಾಗು ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಸೊರಜ ಸೋಷಿಯಲ್ ಗ್ರೂಪಿನ ಅಧ್ಯಕ್ಷರು ಮಹೇಬೂಬ ಶ ಹಡಲಗೇರಿ ಹಾಗೂ ಸದಸ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started