ಮಹಾಮಾರಿ ಈ ವಿಕೋಪವನ್ನು ಎದುರಿಸೋನ ದೇಶದ ಜನತೆ ಸಹಕರಿಸಿ-ಮಲ್ಲನಗೌಡ ಬಿರಾದಾರ ಮನವಿ

ವಿಜಯಪುರ:ಇಡೀ ಮನುಕುಲಕ್ಕೆ ಸವಾಲಾಗಿರುವ ಮಹಾಮಾರಿ ಕೊರೋನಾ ವೈರಸನ್ನು ನಮ್ಮ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಜೀ ಮತ್ತು ನಮ್ಮ ನಾಡಿನ ದೊರೆ ಸನ್ಮಾನ್ಯ ಬಿ. ಎಸ್. ಯಡಿಯೂರಪ್ಪ ಆದೇಶ ಹಾಗೂ ಮಾರ್ಗದರ್ಶನದಂತೆ ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸಿತ್ತಿರುವ, ನಿಯಂತ್ರಣ ಮಾಡುತ್ತಿರುವ ನಮ್ಮ ವೈದ್ಯರು, ಆರೋಗ್ಯ ಇಲಾಖೆಯ ಸರ್ವ ಸಿಬ್ಬಂದಿ ವರ್ಗ, ಪೋಲಿಸ್ ಸಿಬ್ಬಂದಿ ವರ್ಗ, ಸೈನಿಕ ವರ್ಗ, ಮಾಧ್ಯಮ ಮಿತ್ರರು, ಸಂಘ ಸಂಸ್ಥೆಗಳು, ಬುದ್ದಿ ಜೀವಿಗಳು, ಸ್ವಾಮೀಜಿಗಳು, ಜನಪ್ರತಿನಿಧಿಗಳು, ಕಾರ್ಮಿಕ ವರ್ಗ, ಅಧಿಕಾರಿಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮತ್ತು ಸಹಕಾರವನ್ನು ತೋರಿಸುತ್ತಿರುವ ಸರ್ವರ ಕಾರ್ಯ ವೈಖರಿ ಪ್ರಶಂಸನೀಯ ಮತ್ತು ಶ್ಲಾಘನೀಯ. ಈ ಎಲ್ಲಾ ಮಹನೀಯರಿಗೂ ವಿಶೇಷವಾದ ಹೃದಯಪುರ್ವಕವಾದ ಧನ್ಯವಾದಗಳು.

ಈಗ ಬಂದಿರುವ ತುರ್ತು ಸಂಧಿಗ್ದ ಪರಿಸ್ಥಿತಿಯೆಂದರೆ. ಕರೋನಾ ವೈರಸ್. ಈ ವೈರಸ್ ನಾ ಮಹಾಮಾರಿಯನ್ನು ನಮ್ಮ ಹತ್ತಿರ ಬಾರದಂತೆ ಅತಿರ್ವ ಜಾಗರೂಕತೆಯಿಂದ ನಾವು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿಯನ್ನು ಎದುರಿಸಬಹುದು. ಆದ್ದರಿಂದ ಎಲ್ಲಾ ನಮ್ಮ ನಾಗರಕ ಬಂಧುಗಳು ತಾವು ಸ್ವಯಂ ಪ್ರತಿಷ್ಟೆ ಹಾಗೂ ಉದ್ದಟತನವನ್ನು ಪ್ರದರ್ಶಿಸದೆ ಬದಿಗಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಸಧ್ಯದ ಎಲ್ಲಾ ನಿಯಮಗಳು ಜನ ಹಿತಕ್ಕಾಗಿ ಜಾರಿಯಲ್ಲಿವೆ. ಸರ್ಕಾರ ಅಥವಾ ಪೋಲೀಸ್ ಇಲಾಖೆಯನ್ನು ದೂಷಿಸದೆ ಅವರು ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡೋಣ. ಇದು ಸರ್ಕಾರ ಅಥವಾ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇದು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಮನುಕುಲದ ಭವಿಷ್ಯವನ್ನು ಯೋಚಿಸುತ್ತಾ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾಗಿದೆ. ನಾವೆಲ್ಲರೂ ಕ್ಷೇಮದಿಂದ ಇದ್ದರೆ ಇಂತಹ ಹತ್ತಾರು ಹಬ್ಬಗಳನ್ನು ಆಚರಿಸಬಹುದು.

ಬಂಧುಗಳೆ ಆದ್ದರಿಂದ ಸರ್ಕಾರದ ಮುಂದಿನ ಆದೇಶದವರೆಗೂ ಮನೆಯಲ್ಲಿರಿ ಎಂದು ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ ಅಂತರವನ್ನು ಕಾಪಾಡಿಕೊಳ್ಳಿರಿ. ಪ್ರತಿಯೊಂದು ಘಂಟೆಗೊಮ್ಮೆ ಕೈಯನ್ನು ತೊಳೆದು ಕೊಳ್ಳಬೇಕು, ಸ್ಯಾನಿಟೈಜರ್ ಉಪಯೋಗಿಸಬೇಕು. ಯೋಗಭ್ಯಾಸವನ್ನು ಮಾಡುತ್ತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಆದೇಶ ಮತ್ತು ನಿರ್ದೇಶನದ ಆಧಾರದ ಮೇಲೆ ಮಾತ್ರ ಔಷಧಿಗಳನ್ನು ಉಪಯೋಗಿಸಬೇಕು. ಅನಾವಶ್ಯಕ ಆತಂಕ ಬೇಡ. ವಿಶೇಷವಾಗಿ ಚಿಕ್ಕ ಮಕ್ಕಳು ಹಾಗೂ ವಯೋವೃದ್ದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಕಸ್ಮಾತ್ ತಾಗಿ ಸೀನು ಬಂದಾಗ, ಕೆಮ್ಮಿದಾಗ, ಅತೀ ಹತ್ತಿರದಿಂದ ಮಾತನಾಡಿದಾಗ ದಯವಿಟ್ಟು ಕರವಸ್ತರ ಅಥವಾ ಟಾವೆಲ್ ಉಪಯೋಗಿಸಿ. ನಂತರ ಸುತ್ತಮುತ್ತಲಿನ 2 ಮೀಟರ್ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಿ. ಆಗಾಗ್ಗೆ ನೀರನ್ನು ಕುಡಿಯಿರಿ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರು ತೋಟಗಳಲ್ಲಿ ಇರುವುದು ತುಂಬಾ ಒಳ್ಳೆಯದು. ಇಂತಹ ಸಂದಿಗ್ಧ ಸಮಯದಲ್ಲಿ ಸಹಾಯ ಕೇಳಿದ ಅಸಹಾಯಕ ರಿಗೆ ಮತ್ತು ಬಡವರಿಗೆ ತಮ್ಮ ಕೈಯಿಂದಾದ ಸಹಾಯ ಸಹಕಾರ ಮಾಡಿ. ಎಲ್ಲರೂ ಒಕ್ಕಟ್ಟಾಗಿ ಈ ಮಹಾಮಾರಿಯನ್ನು ಹೊಡಿದೋಡಿಸಿ ಮನುಕುಲವನ್ನು ಉಳಿಸೋಣ. ದಯವಿಟ್ಟು ಧನಾತ್ಮಕ ಚಿಂತನೆ ಇರಲಿ.

ಎಂದು ಮಾಹಿತಿ ತಂತ್ರಜ್ಞಾನ ಉದ್ಯಮಿ, ಮುದ್ದೇಬಿಹಾಳ ಮತ್ತು ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣ ರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ. ಹೇಳಿದ್ದಾರೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started