ರಾಷ್ಟ್ರದಾದ್ಯಂತ ಭೀಕರ ಕೊರೊನಾ ವೈರಸ್ ಹಬ್ಬಿದ ಹಿನ್ನೆಲೆಯಲ್ಲಿ ಎಲ್ಲೆಡೆ ಲಾಕಡೌನ್ ಆದ ಪರಿಣಾಮ ಏಪ್ರಿಲ್ ೧೪ ರ ವರೆಗೆ ಭಾರತ ಬಂದ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಅದೆಷ್ಟೋ ಕೂಲಿ ಕಾರ್ಮಿಕರು ಇತ್ತ ಕೆಲಸವನ್ನು ಮಾಡದೇ ಕೊರೊನ ವೈರಸ್ ಹರಡಿರುವದರಿಂದ ಬಡಕುಟುಂಬಗಳು ಸಂಕಷ್ದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬಂದೋದಗಿದೆ.
ಇಂತಹ ಸಂದರ್ಭಗಳಲ್ಲಿ ಅಥಣಿ ತಾಲ್ಲೂಕು ಪಂಚಾಯತ್ ಸದಸ್ಯ ದಿಲೀಪ್ ಹಲವಾರು ಬಡ ಕುಟುಂಬಗಳ ಮನೆಮನೆಗೆ ತೆರಳಿ ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಜನರ ಕಷ್ಟಕಾಲದಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿವುದು ನಿಜಕ್ಕೂ ಬಡಕುಟುಂಬಗಳಿಗೆ ಸಂತೋಷದ ವಿಷಯ ಎಂದು ವೃದ್ದೆ ರತ್ನವ್ವಾ ಹೇಳುತ್ತಾರೆ.
ಇದೆ ಸಂದರ್ಭದಲ್ಲಿ ಮಾತನಾಡಿದ ತಾಪಂ ಸದಸ್ಯ ದಿಲೀಪ ಕಾಂಬಳೆ ಮಾತನಾಡಿ: ಮಹಾಮಾರಿ ಕೊರೊನಾ ವೈರಸ್ ಅತ್ಯಂತ ಗಂಭೀರ ವೈರಸ್ ಆಗಿದ್ದು ಯಾರೂ ಮನೆಬಿಟ್ಟು ಹೊರಗೆ ಬರಬಾರದೆಂದು ಮನವಿ ಮಾಡಿದರು ಹಾಗೆಯೇ ನಾನು ಬಡಕೂಲಿಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಿದ್ದು ಎಕೆಂದರೆ ಕೆಲಸವಿಲ್ಲದೆ ಮನೆಯಲ್ಲಿ ಇದ್ದು ಆಹಾರ ಸಮರ್ಪಕವಾಗಿ ಸಿಗದೇ ಇದ್ದುದನ್ನು ಮನಗಂಡು ನನ್ನ ಕೈಲಾದ ಅಲ್ಪ ಸಹಾಯ ಮಾಡಿದ್ದೇನೆ ಎಂದು ಹೇಳಿದರು.
ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064