
ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಕೊರೋನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎನ್ನುವ ಸಂದೇಶವನ್ನು ಮತ್ತೊಮ್ಮೆ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಏಪ್ರಿಲ್ 5ರಂದು ರಾತ್ರಿ ದೀಪ ಬೆಳಗಿಸಿ ಎಂದು ಕರೆ ನೀಡಿದ್ದಾರೆ.
ದೇಶವನ್ನು ಉದ್ದೇಶಿಸಿ ಇಂದು ಅವರು ಮಾತನಾಡಿದ ಅವರು, ಏಪ್ರಿಲ್ 5ರ ರಾತ್ರಿ 9 ಗಂಟೆಗೆ ಮನೆಯ ಎದುರು ಇಲ್ಲವೆ ಬಾಲ್ಕನಿಯಲ್ಲಿ ನಿಂತು 9 ನಿಮಿಷ ಮೊಂಬತ್ತಿ, ದೀಪ, ಬ್ಯಾಟರಿ ಇಲ್ಲವೆ ಮೊಬೈಲ್ ಲೈಟ್ ಬೆಳಗಿಸಿ. ಈ ಸಂದರ್ಭದಲ್ಲಿ ಮನೆಯ ಲೈಟ್ ಗಳನ್ನು ಸಂಪೂರ್ಣ ಆರಿಸಿರಿ ಎಂದು ಕರೆ ನೀಡಿದ್ದಾರೆ.
ಮಾರ್ಚ್ 22ರಂದು ನಡೆಸಿದ ಜನತಾ ಕರ್ಫ್ಯೂ ಅತ್ಯಂತ ಯಶಸ್ವಿಯಾಗಿದೆ. ಇಡೀ ವಿಶ್ವವೇ ಇದನ್ನು ಪ್ರಶಂಸಿದೆ ಮತ್ತು ಅನುಸರಿಸುತ್ತಿದೆ ಎಂದ ಮೋದಿ, ಇನ್ನೂ ಎಷ್ಟು ದಿನ ಈ ಪರಿಸ್ಥಿತಿ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಕೊರೋನಾ ಹೊಡೆದೋಡಿಸಲು ಇದು ಅನಿವಾರ್ಯ ಎಂದರು.
ಏಪ್ರಿಲ್ 5ರಂದು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡೇ ದೀಪ ಬೆಳಗಿಸಬೇಕು. ಯಾರೂ ಹತ್ತಿರ ಸೇರಬಾರದು. ರಸ್ತೆಗೆ ಇಳಿಯಬಾರದು. ಮಹಾಭಾರತದ ಸಂದೇಶವನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಿ. ನಾವು 130 ಕೋಟಿ ಜನರೂ ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ಸಾರಬೇಕಾಗಿದೆ ಎಂದೂ ಅವರು ವಿನಂತಿಸಿದ್ದಾರೆ.
ರಾಯಲ್ ಟಿವಿ ವೆಬ್ ನ್ಯೂಸ್ ನವದೆಹಲಿ ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts