ಸಮಗ್ರ ಕ್ರಾಂತಿಯ ಹರಿಕಾರ ಗುರು ಬಸವಣ್ಣನವರು:

ಗುರು ಬಸವ ವಚನ ಮಂಟಪದಲ್ಲಿ ಎಲ್ಲ ಶರಣ ಶರಣೆಯರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗುರು ಬಸವಣ್ಣನವರ ಪ್ರಾರ್ಥನೆ, ವಚನ ಚಿಂತನ ಹಾಗೂ ಬಸವ ನಾಮಜಪ ಸ್ಮರಣೆ ಮಾಡಿದರು.ಈ ಕಾರ್ಯಕ್ರಮ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ನಡೆಯಿತು.

ಮತ್ರ್ಯ ಲೋಕದ ಮಹಾ ಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ.
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿದರು.
ಗುರುಬಸವಣ್ಣನವರನ್ನು, ನಮ್ಮ ಉಸಿರಾಗಿ, ಅವರ ಸಂದೇಶಗಳನ್ನು ನಮ್ಮ ಜೀವನದ ಹಾಸು ಹೊಕ್ಕಾಗಿ ಮಾಡಿಕೊಳ್ಳಬೇಕು. ಗುರುಬಸವಣ್ಣನವರ ಸಂದೇಶಗಳನ್ನು ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ತಿಳಿಸುವ ಸಂಕಲ್ಪ ತಾಳಿ, ಆ ಮೂಲಕವಾಗಿ ಶಾಂತಿ ಸಮಾಧಾನ, ನೆಮ್ಮದಿಗಳು ನೆಲೆಗೊಳ್ಳುವಂತೆ ಮಾಡಿ, ಈ ಮತ್ರ್ಯ ಲೋಕವನ್ನು ಸುಂದರಗೊಳಿಸೋಣ. ಗುರುಬಸವಣ್ಣನವರ ಮೆಚ್ಚುಗೆಯ ಮಕ್ಕಳಾಗೋಣ. ಎಂದು ಗುರುವಿನ ಸ್ಮರಣೆ ಮಾಡಿದರು.ಈ ಕಾರ್ಯಕ್ರಮ ರವಿ ಶರಣರ ಸಾನಿಧ್ಯದಲ್ಲಿ ನಡೆಯಿತು.
ರಾಯಲ್ ಟಿವಿ ನ್ಯೂಸ್ ಬಾಗಲಕೋಟ,ಸುದ್ದಿಗಾಗಿ ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts