ಜಿಲ್ಲೆಗಳಿಂದ ಬಂದ ಜನರಿಗೆ ಬಸ್ ನಿಲ್ದಾಣದಲ್ಲಿ ಊಟದ ವ್ಯವಸ್ಥೆ ಮಾಡಿದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಕೋವಿಡ್-19 ಸಲುವಾಗಿ ಲಾಕ್ ಡೌನ್ ಆದಕಾರಣ ಬೇರೆ ಜಿಲ್ಲೆಗಳಲ್ಲಿ ಇದ್ದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೂಲಿ ಕಾರ್ಮಿಕರಿಗೆ ಅವರ ಆರೋಗ್ಯವನ್ನು ವಿಚಾರಿಸಿ ಹಸಿವೆಯಿಂದ ಬಳಲುತ್ತಿದ್ದ ಅವರಿಗೆ ಸ್ಥಳದಲ್ಲಿಯೇ ಊಟದ ವ್ಯವಸ್ಥೆ ಮಾಡಿಸಿ ವೈದ್ಯಕೀಯ ತಪಾಸಣೆ ಮಾಡಿಸಿದರು. ನಂತರ ಅಹಾರ ಪದಾರ್ಥಗಳ ಕಿಟ್ ನೀಡಿ ಅವರ ಅವರ ಗ್ರಾಮಗಳಿಗೆ ಕಳುಹಿಸಿಕೊಟ್ಟ ಮಾನ್ಯ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಹಾಗೂ ಅವರ ಧರ್ಮಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಜಿ ಎಸ್ ಮಳಗಿ,ಪಿಎಸ್ಐ ಮಲ್ಲಪ್ಪ ಮಡ್ಡಿ, ಸಾರಿಗೆ ವ್ಯವಸ್ಥಾಪಕ ರಾಹುಲ್ ಹೊನಸೂರೆ,ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started