ರಾಜು ಕಾಗೆ ಗೆ ಪರೋಕ್ಷವಾಗಿ ಟಾಂಗ್ ನೀಡಿದ ಲಕ್ಷ್ಮಣ ಸವದಿ

ಡಿಸಿ ಎಮ್ ಮತ್ತು ರಾಜು ಕಾಗೆ ಜುಗಲ್-ಬಂದೀ,ನಗೆಯ ಕಡಲಲ್ಲಿ ತೇಲಿದ ಸಾರ್ವಜನಿಕರು

ಕೃಷಿ ಪತ್ತಿನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಡಿಸಿಎಮ್ ಲಕ್ಷ್ಮಣ ಸವದಿ ತಮ್ಮ ಪಕ್ಷ ತೊರೆದಿರುವ ರಾಜು ಕಾಗೆಗೆ ಟಾಂಗ ಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಕಾಗವಾಡ ಮತಕ್ಷೇತ್ರದ ಅಬ್ಯರ್ಥಿ ಆಗಿ ಬಿಜೆಪಿಯ ರಾಜು ಕಾಗೆಗೆ ಸೆಡ್ಡು ಹೊಡೆದಿದ್ದ ರಾಜು ಕಾಗೆಗೆ
ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ ಡಿಸಿಎಮ್ ಲಕ್ಷ್ಮಣ ಸವದಿ ಮಾತು ಸದ್ಯ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬೆಳಗಾವಿ ‌ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದ  ಘಟನೆ ಇದಾಗಿದ್ದು ಪ್ರಾಥಮಿಕ
ಕೃಷಿ ಸಹಕಾರಿ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರಾಜು ಕಾಗೆಗೆ ನೀನು ಸಹಕಾರಿ ರಂಗಕ್ಕೆ ಬರಬಬೇಡ.ಬೆಕಿದ್ದರೆ ಮೂರು ವರ್ಷದ ಬಳಿಕ
ಇತ್ತ ಮಹೇಶ ಕುಮಠಳ್ಳಿ ಅತ್ತ ಶ್ರೀಮಂತ ಪಾಟೀಲ ಇಬ್ಬರೂ ಇರ್ತಾರೆ ಅವರ ಜೊತೆ ನಿನಗೂ ಒಂದು ಹುದ್ದೆ ತೆಗೆದಿರಿಸುತ್ತೆನೆ ಬಂದು ಬಿಡು..ಎಂದು ಡಿಸಿಎಮ್ ಲಕ್ಷ್ಮಣ ಸವದಿ ಹೇಳುತ್ತಿದ್ದಂತೆಯೇ ಸಭೆಯಲ್ಲಿ ನಗೆಯ ಅಲೆ ಎದ್ದಿದೆ
ಇದೇ ವೇಳೆ ರಾಜು ಕಾಗೆ ಆರಿಸಿ ಬರುವದಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ ಲಕ್ಷ್ಮಣ ಸವದಿ
ರಾಜಕಾರಣದಲ್ಲಿ ಯಾವುದು ಶಾಸ್ವತವಲ್ಲ ನಾವು ಒಂದೆ ಕುಟುಂಬದ ಸದಸ್ಯರಿದ್ದಂತೆ.ಮೂರು ವರ್ಷ ಮನೆಯಲ್ಲಿ ಇರು ನಂತರ ನಿನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ಒಂದು ಸ್ಥಾನ ಕೊಡ್ತಿನಿ ಅಂದಿದ್ದಾರೆ.

ಲಕ್ಷ್ಮಣ ಸವದಿ ಮಾತನಾಡಿ:

ಇದಕ್ಕೆ ಪ್ರತಿಯಾಗಿ ಮತದಾರರು ನನಗೆ ತಾಕೀತು ಮಾಡಿ ಮತ ನೀಡಿದ್ದಾರೆ ಎಂದು ರಾಜು ಕಾಗೆ ಉತ್ತರಿಸಿದ್ದಾರೆ.
ರಾಜು ಕಾಗೆ ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಬ್ಯರ್ಥಿಯಾಗಿದ್ದು ಕಳೆದ ಬಾರಿ ಬಿಜೆಪಿಯಿಂದ ಪರಾಜಿತ ಮಾಜಿ ಶಾಸಕರೂ ಹೌದು
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆದು

ಕಾಂಗ್ರೆಸ್ ನಿಂದ ಸ್ಪರ್ದಿಸಿರುವ ರಾಜು ಕಾಗೆಗೆ ಬಹಿರಂಗವಾಗಿ ಲಕ್ಷ್ಮಣ ಸವದಿ ಆಹ್ವಾನ ನಿಡಿದ್ದು ಸದ್ಯ ಸಾರ್ವಜನಿಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ವರದಿ:ಎಸ್ ಕಾಂಬಳೆ ಅಥಣಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started