ಗ್ರಾಮ ಪಂಚಾಯತ ವತಿಯಿಂದ ಗ್ರಾಮ ಸಭೆ

ವಿಜಯಪುರ ಜಿಲ್ಲೆಯ ಸುದ್ದಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳೊಂದಿಗೆ ಗ್ರಾಮ ಸಭೆಯನ್ನು ಜೋತಿ ಬೆಳಗಿಸುವುದರ ಮುಖಾಂತರ ಉದ್ಘಾಟನೆ ಮಾಡಿದರು. ಶಾಲಾ ಮಕ್ಕಳಿಗೆ ತಮ್ಮ‌ಹಕ್ಕುಗಳ ಬಗ್ಗೆ ತಿಳಿಸಿ ಹೇಳಲಾಯಿತು,ಮನೆಯಲ್ಲಿ ಮುಖ್ಯವಾಗಿ ಶೌಚಾಲಯನ್ನು ಕಟ್ಟಲು,ಶಾಲೆಯಲ್ಲಿ ಎನೆ ಸಮಸ್ಯೆ ಇದ್ದರು ನಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು,ಶಿಕ್ಷಣದ ಗುಣಮಟ್ಟದ ಬಗ್ಗೆ ಪರಿಸಿಲಿಸಿ ,ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕರು ನನಗೆ ಸನ್ಮಾನಿಸಿ ಗೌರವಿಸಿದರು,ಮಕ್ಕಳ ಹಕ್ಕುಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿಗಳು ಮಾತನಾಡಿದರು,ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕಮಲಾಭಾಯಿ ಯಮನೂರಿ ಲಮಾಣಿ ಯವರು ವಹಿಸಿದ್ದರು,ಸುಮಾರು ೪ ಗ್ರಾಮಗಳಿಂದ‌ ಆಶಾ ಕಾರ್ಯಕರ್ತೆಯರು,ಮಹಿಳಾ ಸಹಾಯಕಿರು,ಅಂಗನವಾಡಿ ಕಾರ್ಯಕರ್ತೆರು,ಭಾಗವಹಿಸಿದ್ದರು,ಮುಖ್ಯ ಗುರುಗಳು,ಶಿಕ್ಷಕರು ಉಪಸ್ಥಿತಿ ಇದ್ದರು,ಅಧಿಕಾರಿಗಳ ಜೊತೆಗೂಡಿ ವಿಧ್ಯಾರ್ಥಿಗಳ ಜೋತೆಗೆ ಮಧ್ಯಾಹ್ನದ ಊಟ ಮಾಡಿದರು,ಪೌಷ್ಟಿಕ ಆಹಾರದ ಬಗ್ಗೆ, ಬಿಸಿ ಊಟದ ಬಗ್ಗೆ, ಶಾಲೆಯಲ್ಲಿ ಕುಡಿಯುವ ನೀರಿನ ಬಗ್ಗೆ, ಮೂಲ ಭೂತ ಸೌಲಭ್ಯದ, ಶೌಚಾಲಯದ ಬಗ್ಗೆ ಪರಿಸಿಲಿಸಿ ಮುಖ್ಯಗುರುಗಳಿಂದ ವರದಿಯನ್ನು ಪಡೆಯಲಾಯಿತು.ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಹಾಗೂ ಶಾಲಾ ಸುತ್ತಲು ಕಾಂಪೌಂಡ್ ಕಟ್ಟಿಸಲು ಮನವಿ ಮಾಡಿದರು.ಶಾಲಾ ಅಭಿವೃದ್ಧಿಗೆ ನಮ್ಮಿಂದ ಸಾಧ್ಯವಾದಷ್ಟು ಕೆಲಸ ಮಾಡಲು ನಾನು ಸಿದ್ದನಿದ್ದೇನೆ,ಅದಕ್ಕೆ ಪಂಚಾಯತ್ ಅಧಿಕಾರಿಗಳು ಸಂಪೂರ್ಣ ಸಾತನೀಡುವ ಭರವಸೆ ನಿಡಿದ್ದಾರೆ ನಮ್ಮೂರ ಶಾಲೆಯಲ್ಲಿ ನನ್ನ ಪ್ರಥಮ ಸಭೆ ಇದಾಗಿದ್ದು ತುಂಬಾ ಸಂತೋಷ ತಂದು ಕೊಟ್ಟಿತು, ಊರಿನ ಅಭಿವೃದ್ಧಿ ಮಾಡಲು ನಾನು ಸದಾ ಸಿದ್ದನಾಗಿದ್ದೇನೆ..ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಯಾಗಿ ನೆರವೆರಿಸಲು ಸಹಾಕಾರ ನೀಡಿದ ಮುಖ್ಯಗುರುಗಳಿಗೆ,ಶಿಕ್ಷಕರಿಗೆ,ಆಡಳಿತಮಂಡಳಿಗೆ,ಮುದ್ದು ವಿದ್ಯಾರ್ಥಿಗಳಿಗೆ ತುಂಬಾ ಧನ್ಯವಾದಗಳು ಎಂದು ಗ್ರಾಮ ಪಂಚಾಯತ ಸದಸ್ಯ ಶ್ರೀಶೈಲ ಹೂಗಾರ ಹೇಳಿದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started