ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ವಿಜಯೋತ್ಸವ ಶಾಸಕ ನಡಹಳ್ಳಿಗೆ ಸಚಿವ ಸ್ಥಾನಕ್ಕೆ ಆಗ್ರಹ

ವಿಜಯಪುರ:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಉಪ ಚುನಾವಣೆಯಲ್ಲಿ 12 ಸ್ಥಾನಗಳನ್ನು ಬಾಚಿಕೊಂಡು ಭರ್ಜರಿ ಗೆಲುವು ಸಾದಿಸಿದ ಹಿನ್ನೆಲೆ ಇಲ್ಲಿನ ಬಿಜೆಪಿ ಧುರೀಣರು, ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ವೇಳೆ ಯುವ ಮುಖಂಡರು ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೌದ್ ಹುಲಿಯಾ, ರಾಜಾ ಹುಲಿಯಾ, ಯಡಿಯೂರಪ್ಪಾಗೆ ಜೈ, ಎ.ಎಸ್.ಪಾಟೀಲ ನಡಹಳ್ಳಿಗೆ ಜೈ, ಬಿಜೆಪಿಗೆ ಜೈ ಎಂದೆಲ್ಲ ಸಂಬೋ„ಸಿ ಜಯಘೋಷ ಮಾಡಿದರು. ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಿ ರಮೇಶ ಜಾರಕಿಹೊಳಿ ಗೆಲುವಿಗೆ ಹಗಲಿರುಳು ಶ್ರಮಿಸಿದ ಸ್ಥಳೀಯ ಎ.ಎಸ್.ಪಾಟೀಲ ನಡಹಳ್ಳಿ ಅವರ ಅರ್ಪಣಾ ಮನೋಭಾವವನ್ನು ಕೊಂಡಾಡಿದರು.

ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹಿರಿಯ ಧುರೀಣರಾದ ಪ್ರಭು ಕಡಿ, ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ, ರಾಜೇಂದ್ರ ರಾಯಗೊಂಡ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಸೇರಿದಂತೆ ಹಲವರು ಮಾತನಾಡಿ ಮತದಾರರು ಬಿಜೆಪಿಯನ್ನು, ಯಡಿಯೂರಪ್ಪ ಅವರನ್ನು ಆಶಿರ್ವದಿಸಿ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಲು ಅವಕಾಶ ಮಾಡಿಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ ಮಾಡಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಹಂಕಾರವನ್ನು ಅಡಗಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಪ್ರಶ್ನಾತೀತ ನಾಯಕರನ್ನಾಗಿ ಆಶಿರ್ವದಿಸಿದ್ದಾರೆ ಎಂದು ಹರ್ಷಪಟ್ಟರು. ಸೋಮನಗೌಡ ಪಾಟೀಲ ನಡಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಕಾಶಿಬಾಯಿ ರಾಂಪೂರ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸಹನಾ ಬಡಿಗೇರ, ಬಸಪ್ಪ ತಟ್ಟಿ, ಸದಾಶಿವ ಮಾಗಿ, ಅಶೋಕ ವನಹಳ್ಳಿ, ಮಂಡಲ ಅಧ್ಯಕ್ಷ ಎಂ.ಡಿ.ಕುಂಬಾರ ವಕೀಲರು, ಪ್ರಮುಖರಾದ ಎಸ್.ಎಚ್.ಲೊಟಗೇರಿ ವಕೀಲರು, ಬಿ.ಪಿ.ಕುಲಕರ್ಣಿ, ಶರಣು ಬೂದಿಹಾಳಮಠ, ರಾಜಶೇಖರ ಹೊಳಿ,ಅಶೋಕ ನೇಬಗೇರಿ, ಸಂಗಮೇಶ ವಾಲಿಕಾರ, ಮಂಜು ರತ್ನಾಕರ, ಸಂಜು ಬಾಗೇವಾಡಿ, ಶಿವು ಕನ್ನೊಳ್ಳಿ, ಪುನೀತ್ ಹಿಪ್ಪರಗಿ, ಬಸವರಾಜ ಗುಳಬಾಳ, ರಾಜು ಹೊನ್ನುಟಗಿ, ಸಂಜು ಓಸ್ವಾಲ್, ಜಗದೀಶ ಪಂಪಣ್ಣವರ್, ಪ್ರಭು ಪವಾರ, ಸಂಗಪ್ಪ ಅಬ್ಯಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ನಡಹಳ್ಳಿಗೆ ಸಚಿವ ಸ್ಥಾನಕ್ಕೆ ಆಗ್ರಹ:

ಈ ಸಂದರ್ಭ ಮಾತನಾಡಿದ ಯುವ ಮುಖಂಡರಾದ ಶಿವು ಕನ್ನೊಳ್ಳಿ, ಅಶೋಕ ವನಹಳ್ಳಿ ಸೇರಿದಂತೆ ಹಲವರು ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಹಲವು ದಿನ ಅಲ್ಲೇ ಬೀಡುಬಿಟ್ಟು, ಹಗಲಿರುಳು ಪ್ರಚಾರ ಮಾಡಿ, ರಮೇಶ ಜಾರಕಿಹೊಳಿ ಅವರ ಬಹುಮತದ ಗೆಲುವಿಗೆ ಕಾರಣರಾಗಿರುವ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಅವರ ಸೇವೆ, ಶ್ರಮ, ಪಕ್ಷ ನಿಷ್ಠೆ, ಬುದ್ದಿಮತ್ತೆ ಪರಿಗಣಿಸಿ ಈ ಬಾರಿ ಸಚಿವ ಸ್ಥಾನ ನೀಡಬೇಕು. ಇದರಿಂದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಒತ್ತಾಯಿಸಿದರು. ಈ ಬಗ್ಗೆ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಸೇರಿದಂತೆ ಹಲವು ವರಿಷ್ಠರಿಗೆ ಶೀಘ್ರ ಪತ್ರ ಬರೆದು ಬಿನ್ನವಿಸಿಕೊಳ್ಳುವುದಾಗಿ ತಿಳಿಸಿದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started