ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುದ್ದಿ
ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಮೃತ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ 16ನೇ ವಾರ್ಡನಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಕಿಶೋರ(8)ತಂದೆ ಗಡ್ಡಿವೀರೇಶ ಮೃತಪಟ್ಫಿದ್ದಾನೆ.
ಬಾಲಕ ತಿಂಗಳಿಂದ ವಿಪರೀತವಾಗಿ ಜ್ವರದಿಂದ ಬಳಲುತಿದ್ದು.ಸ್ಥಳೀಯ ಹಾಗೂ ಹೊಸಪೇಟೆ.ಬಳ್ಳಾರಿ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ.ತಿಂಗಳಾದರೂ ಛೇತರಿಸಿಕೊಳ್ಳದ ಹಿನ್ನಲೆಯಲ್ಲಿ ಹಲವು ದಿನಗಳ ಹಿಂದೆಯೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ವಿಪರೀತ ಜ್ವರ ಹಾಗೂ ಅತಿಸಾರ ಬೇದಿಯಿಂದ ಬಳಲುತಿದ್ದ.ಡೆಂಗ್ಯೂ ಜ್ವರದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಬಾಲಕ ತೀರಾ ಅಸ್ವಸ್ಥ ನಾಗಿದ್ದನು.
ಕಾರಣ ಬಾಲಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಚಿಕಿತ್ಸೆಯಿಂದ ಛೇತರಿಸಿಕೊಳ್ಳದ ಬಾಲಕ ಕಿಶೋರ ಶನಿವಾರದಂದು ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ವರದಿ: ವೃಷಭೇಂದ್ರ ಕೂಡ್ಲಿಗಿ
