ಅಥಣಿ ತಾಲೂಕಿನ ವರದಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಕಬ್ಬು ಬೆಳೆ ನಾಶವಾಗಿದೆ.
ಚಂದ್ರಕಲಾ ವಿಠ್ಠಲ ಮಾಚಕನೂರ ಎಂಬುವರಿಗೆ ಸೇರಿದ ಜಮೀನಿನ ರಿ.ಸ.ನಂ-98/4 ನಾಲ್ಕು ಎಕರೆ ಕಬ್ಬು ಬೆಂಕಿಗಾಹುತಿಯಾಗಿ ಸುಮಾರು 6 (ಆರು) ಲಕ್ಷ ರೂಪಾಯಿ ಹಾನಿ ಸಂಬವಿಸಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ತಾಲೂಕಾ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:ಸಚೀನ ಕಾಂಬಳೆ


Published by Royal TV
Royal tv Kannada news online website channel
View more posts