ಮಂಗಳೂರು ಸುದ್ದಿ:
ಪ್ರತಿಭಟನೆ ವೇಳೆ ಇಬ್ಬರ ಸಾವು
ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನೂ ಈ ಗೋಲಿಬಾರ್ ನಲ್ಲಿ ಇಬ್ಬರು ಸಾವಿಗೀಡಾಗಿರುವುದನ್ನು ಮುಸ್ಲಿಂ ಧರ್ಮ ಗುರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಸರಕಾರ ಅಧಿಕೃತವಾಗಿ ಸಾವಿನ ವಿಷಯವನ್ನು ಇನ್ನೂ ಪ್ರಕಟಿಸಿಲ್ಲ.
ಜಲೀಲ್ (49) , ನೌಶೀನ್ (23) ಮೃತರು. ಇಂದು ಬೆಳಗ್ಗೆ ಪ್ರತಿಭಟನೆ ತೀವ್ರತೆ ಹೆಚ್ಚುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಂತರ ಅಶ್ರುವಾಯು ಸಿಡಿಸಲಾಗಿದೆ. ಇದರಿಂದಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಗೋಲಿಬಾರ್ ನಡೆಸಿದ್ದಾರೆ
ಈ ಮಧ್ಯೆ ಇಂದು ಮಧ್ಯಾಹ್ನದಿಂದಲೇ ಮಂಗಳೂರಿನ 5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ನಾಳೆ ಮಧ್ಯ ರಾತ್ರಿವರೆಗೂ ಕರ್ಫ್ಯೂ ಮುಂದುವರಿಯಲಿದೆ. ಮಂಗಳೂರಿನಲ್ಲಿ ಶಾಲೆ, ಕಾಲೇಜಿನ ನಾಳೆ ರಜೆ ಘೋಷಿಸಲಾಗಿದೆ.
ಮಂಗಳೂರಿನ ಘಟನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಷಾಧ ವ್ಯಕ್ತಪಡಿಸಿದ್ದು, ಉನ್ನತ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಇಂತಹ ಮಧ್ಯೆ ಗಲಭೆಗೆ ಹೊರಗಿನ ಅನೇಕ ಶಕ್ತಿಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಕೇರಳದಿಂದ ಸಾಕಷ್ಟು ಜನರು ಮಂಗಳೂರಿಗೆ ಆಗಮಿಸಿರುವ ಶಂಕೆ ವ್ಯಕ್ತವಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆಗೆ ಹೊರಗಿನ ಶಕ್ತಿಗಳ ಪ್ರಚೋದನೆ ನಡೆಯುತ್ತಿರುವ ಬಗ್ಗೆ ಮಾಹಿತಿ ವ್ಯಕ್ತವಾಗಿದೆ.

Published by Royal TV
Royal tv Kannada news online website channel
View more posts