ಚಾಲಕನ ಪುತ್ರ ಇಂದು ಎ.ಸಿ. ಹುದ್ದೆಗೆ ಆಯ್ಕೆ

ಚಿಕ್ಕೋಡಿ :
ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಅನ್ನುವದನ್ನ ಚಾಲಕನ ಮಗ ಇಂದು ಸಾಧನೆ ಮಾಡುವುದರ ಮೂಲಕ ಆ ಗ್ರಾಮದ ಹೆಮ್ಮೆಯ ಜೊತೆಗೆ ತಂದೆ ತಾಯಿಯ ಗೌರವವನ್ನು ಹೆಚ್ಚಿಸಿದ್ದಾನೆ ಜಗದೀಶ ಅಡಹಳ್ಳಿ. ಈತ ಮಧ್ಯಮ ವರ್ಗದ ಶ್ರೀಕಾಂತ ಹಾಗೂ ಸುಮಿತ್ರಾ ಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ ಕಿರಿಯ ಪುತ್ರ. 28 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಗ್ರಾಮ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಜಗದೀಶ ಅಡಹಳ್ಳಿ ಅವರು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಜಗದೀಶ, ಶೇ80.06 ಅಂಕ ಗಳಿಸಿದ್ದರು. ಪಿಯುಸಿ ಅಥಣಿ ತಾಲ್ಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 89 ಅಂಕ ಪಡೆದಿದ್ದರು. ಪದವಿಯನ್ನು ಇಲ್ಲಿನ ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಶೇ 87 ಅಂಕಗಳೊಂದಿಗೆ ಪದಿಯಲ್ಲಿ ತೇರ್ಗಡೆಯಾಗಿ 2014 ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.
ಈಗ ಕೆಎಎಸ್ ಆಗಿರುವ ಜಗದೀಸ ಅವರ ಮನೆಗೆ ಗ್ರಾಮದ ಜನರು ಹಾಗೂ ವಿವಿಧ ಸಂಘಟನೆಗಳು ಬಂದು ಅವರಿಗೆ ಸತ್ಕಾರ ಮಾಡಿ ಅವರಿಗೆ ಶುಭಾಶಯ ಕೋರುತ್ತಿದ್ದು ಅವರ ಮನೆಯಲ್ಲಿ ಸಂತಸದ ಹಬ್ಬ ಮೂಡಿದೆ.
ಬಡವನಾಗಿ ಹುಟ್ಟಿದ ಜಗದೀಶ ಅವರು ತಂದೆ ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಿನ ಜಗದೀಶ ತನ್ನ ತಂದೆ ಶ್ರೀಕಾಂತ ಅವರ ಜೊತೆ ಕಾರ್ಖಾನೆಗೆ ಹೋದಾಗ 2013ರಲ್ಲಿ ವಿಧಾನಸಭೆ ಚುನಾವಣಾ ಕೆಲಸಕ್ಕೆ ತಂದೆ ಶ್ರೀಕಾಂತ ಚಾಲಕರಾಗಿ ನಿಯೋಜನೆಗೊಂಡಿದ್ದರು. ಆಗ ಐಎಎಸ್ ಅಧಿಕಾರಿಗಳು ಆಡುತ್ತಿದ್ದ ಮಾತುಗಳು ಅವರಿಗೆ ನೀಡುವ ಗೌರವ ನನಗೆ ಸ್ಫೂರ್ತಿ ನೀಡಿದವು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಪ್ರಯತ್ನ ಮಾಡಿದೆ ಆಗ ನನ್ನ ತಂದೆ ತಾಯಿ ದಿನನಿತ್ಯ ಕೂಲಿ ಮಾಡಿ ನನಗೆ ಓದಲು ಸಹಕಾರ ನೀಡಿದ್ದಾರೆ.
ನಾನು ಬಡವನಾಗಿರಬಹುದು ವಿದ್ಯೆ ಹಾಗೂ ಸತತ ಪ್ರಯತ್ನದಿಂದ ಏನಾದರೂ ಸಾಧಿಸಬಹುದು ಎನೊದಕ್ಕೆ ನಾನಾ ಉದಾಹರಣೆ. ಬಡವರು ಯಾರು ದೊಡ್ಡ ಹುದ್ದೆಗೆ ಹೋಗಬಾರದು ಎನ್ನುವ ಮಾತು ಯಾರಿಂದಲೂ ಬರಬಾರದು ಎಂದು ಕೆಎಎಸ್ ಓದುವ ಬಡ ಮಕ್ಕಳಿಗೆ ನಾನೆ ಉದಾಹರಣೆ ಎನ್ನುತ್ತಾರೆ ಜಗದೀಶ ಅಡಹಳ್ಳಿ.
– ಜಗದೀಶ ಅಡಹಳ್ಳಿ – ಕೆಎಎಸ್
2014ರಲ್ಲಿ ನವದೆಹಲಿಯಲ್ಲಿ ಐಎಎಸ್ ಕೋಚಿಂಗ್ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದ ಜಗದೀಶ, 5 ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನೂ ಬರೆದಿದ್ದಾರೆ. ಕೆಎಎಸ್ 2ನೇ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಐಎಎಸ್ ಪರೀಕ್ಷೆ ಎದುರಿಸಿದ ಅನುಭವವೂ ಇದಕ್ಕೆ ಸಹಾಯವಾಗಿದೆ.
ನನ್ನ ಮಗ ಕೆಎಎಸ್ ಹುದ್ದೆಗೆ ಆಯ್ಕೆಯಾಗಿದ್ದಾನೆ ನನಗೆ ತುಂಬಾ ಖುಷಿಯಾಗಿದೆ. ನಾನು ಒಬ್ಬ ಸಾಧಾರಣ ಚಾಲಕ ಈಗ ನನ್ನ ಮಗ ಕೆಎಎಸ್ ಅಧಿಕಾರಿ ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಂತೋಷದ ವಿಷಯ ನಮ್ಮ ಕೃಷ್ಣಾ ಸಕ್ಕರೆ ಕಾರ್ಖಾನೆಯವರ ಸಲಹೆ ಪಡೆದುಕೊಂಡು ನಾನು ನನ್ನ ಮಗನಿಗೆ ವಿದ್ಯಾಭ್ಯಾಸ ನೀಡಿದ್ದೇನೆ ಈಗ ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದು ನಮ್ಮಗೆ ಹೆಮ್ಮೆಯ ವಿಷಯ ಅನ್ನುತ್ತಾರೆ ಜಗದೀಶ ಅವರ ತಂದೆ ಶ್ರೀಕಾಂತ
– ಶ್ರೀಕಾಂತ ಅಡಹಳ್ಳಿ – ಜಗದೀಶ ತಂದೆ.
ಜಗದೀಶನ ಪ್ರತಿಫಲಕ್ಕೆ ಇಂದು ನನ್ನ ಮಗನಿಗೆ ಪ್ರತಿಫಲ ಸಿಕ್ಕಿದೆ ಇಂದು ನಮ್ಮ ಅಡಹಳ್ಳಿ ಮನೆತನದ ಗೌರವ ಹೆಚ್ಚಿಸಿದ್ದಾನೆ. ಆತ ಶಾಲೆ ಕಲಿಯಬೇಕೆದರೆ ಕಾಲಿನಲ್ಲಿ ಚಪ್ಪಲಿ ಇಲ್ಲದೇ ಸರಿಯಾದ ಉಡುಗೆಗಳಿಲ್ಲದ ಶಾಲೆ ಕಲೆತು ಇಂದು ಕೆಎಎಸ್ ಪಾಸ ಮಾಡಿದ್ದಾನೆ ನಮ್ಮ ಗೌರವ ಹೆಚ್ಚಿಸಿದ್ದಾನೆ ಎಂದು ಆಗದ ಸಂತೋಷ ಈಗ ನಮ್ಮಗಾಗಿದೆ ಎನ್ನುತ್ತಾಳೆ ಜಗದೀಶನ ತಾಯಿ ಸುಮಿತ್ರಾ
– ಸುಮಿತ್ರಾ – ಜಗದೀಶನ ತಾಯಿ
ಒಟ್ಟಾರೆಯಾಗಿ ಇಂದಿನ ಅಧುನಿಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಛಲವಿದ್ದರೆ ಸತತ ಓದು ಮತ್ತು ಪರಿಶ್ರಮ ನಮ್ಮ ಕನಸುಗಳನ್ನು ನನಸು ಮಾಡುವದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕೆ ಜಗದೀಶ ಅಡಹಳ್ಳಿ ಮಾದರಿಯಾಗಿದ್ದಾರೆ.
ಐಎಎಸ್ ಕೆಎಎಸ್ ಕನಸು ಕಾಣುತ್ತಿರುವ ಬಡ ಮಕ್ಕಳಿಗೆ ಇಂದು ಚಾಲಕನ ಮಗ ಮಾದರಿಯಾಗಿದ್ದು ದಿನವೂ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ಜಗದೀಶ ಈಗ ಇನ್ನಷ್ಟು ಬಡ ಮಕ್ಕಳು ಉತ್ತಮ ಹುದ್ದೆಗಳನ್ನು ಅಲಂಕರಿಸಿ ತಮ್ಮ ಉದಾತ್ತ ಕೊಡುಗೆಯನ್ನು ಸಮಾಜಕ್ಕೆ ನೀಡುವಂತಾಗಲಿ ಅನ್ನುವದು ನಮ್ಮ ಆಶಯ.
ವರದಿ:ಸಚೀನ ಕಾಂಬಳೆ
Published by Royal TV
Royal tv Kannada news online website channel
View more posts