ನೊಂದ ಶಿಕ್ಷಕಿಯಿಂದ ದಯಾಮರಣ ಕೋರಿ ರಾಜ್ಯಪಾಲರಗಿ ಮನವಿ

ನೊಂದ ಶಿಕ್ಷಕಿ ಭೂದೇವಿ ಹುನಗುಂದ ದಯಾಮರಣ ಕೋರಿ ರಾಜ್ಯಪಾಲರಿಗೆ ಅರ್ಜಿ:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯಲ್ಲಿರುವ ಶ್ರೀ ಬಸವ ಬಾಲ ಭಾರತಿ ಪ್ರಾಥಮಿಕ ಶಾಲೆ ಢವಳಗಿ ಯಲ್ಲಿ ಸುಮಾರು 11 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ಭೂದೇವಿ ಹುನಗುಂದ ಇವರನ್ನು ಹೊರತು ಪಡಿಸಿ ಆಡಳಿತ ಮಂಡಳಿಯವರ ಸಂಬಂಧಿಕನನ್ನು ಶಿಕ್ಷಕರನ್ನಾಗಿ ಸೇರಿಸಿಕೊಂಡು ಅನುದಾನ ಪಡೆದಿದ್ದು ನೊಂದ ಶಿಕ್ಷಕಿ ಸದರೀ ಶಾಲೆಯ ಅನುಮೋದನೆಯನ್ನು ರದ್ದುಪಡಿಸಬೇಕೆಂದು ಸುಮಾರು ಅರ್ಜಿಗಳನ್ನು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಕಾರಣ ರಾಜ್ಯಪಾಲರಿಗೆ ದಯಾಮಾರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸನ್ 2005 ರಿಂದ ಸುಮಾರು ವರ್ಷಗಳ ಕಾಲ ಶಾಲೆ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟಿದ್ದು ಶಿಕ್ಷಣ ಇಲಾಖೆಗೆ ಲಂಚನೀಡಿ ಶಾಲೆಗೆ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ. ಅನುದಾನ ತಡೆಹಿಡಿಯುವಂತೆ ಜನೆವರಿ 2019 ರಲ್ಲಿ ಧರಣೀಸತ್ಯಾಗ್ರವನ್ನು ಕೂಡ ನಡೆಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮಲ್ಲಿ ದಾಖಲೆಗಳು ಇಲ್ಲ ಎಂದು ಹೇಳಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಿಕ್ಷಕಿಯ ರುಜು ಇರುವ ಅಂಕಪಟ್ಟಿಯನ್ನು ಒದಗಿದರೂ ಯಾವುದೇ ಕ್ರಮ ಕೈಗೊಳ್ಳದೇ ಶಾಲೆಯ ಶಿಕ್ಷಕರ ಪ್ರಥಮ ವೇತನವನ್ನೂ ಬಿಡುಗಡೆ ಮಾಡಿದ್ದು ಪ್ರಭಾವೀ ಆಡಳಿತ ಮಂಡಳಿಯವರ ವಿರುದ್ದ ಎಷ್ಟೇ ದೂರುಗಳನ್ನು ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕಾರಣ ನಮ್ಮ ನೋವಿಗೆ ಕಷ್ಟಕ್ಕೆ ಇಲ್ಲಿ ಯಾರು ಸ್ಪಂದಿಸುತ್ತಿಲ್ಲ ಆದ್ದರಿಂದ ದಯಾಮರಣ ಕರುಣಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started