ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನ ಚುನಾವಣೆಯಲ್ಲಿ ಎರಡನೆಯ ಬಣದಿಂದ ಮೊದಲನೇಯ ಬಣಕ್ಕೆ ಬೆಂಬಲ ಸೂಚಿಸಿದ ಅಭ್ಯರ್ಥಿಗಳು

ವಿಜಯಪುರ ಜಿಲ್ಲೆಯ ಸುದ್ದಿ:

ಮುದ್ದೇಬಿಹಾಳ:ಜನರಲ್ಲಿ ಸಂಚಲನವನ್ನು ಮೂಡಿಸಿದ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನ ಚುನಾವಣೆಯಲ್ಲಿ ಈಗ ಹಲವಾರು ಬದಲಾವಣೆಯಾಗಿವೆ.ಇಂದು ಹನ್ನೆರಡು ಅಭ್ಯರ್ಥಿಗಳಿದ್ದ ಎರಡನೇ ಪೆನಲ್ ನಲ್ಲಿನ ಸ್ಪರ್ಧೆಗೆ ಇಳಿದ ಸಿಲಿಂಗ್ ಪ್ಯಾನ್ ಗುರುತಿನ ಶಿವಪ್ಪ ಸಿದ್ದಪ್ಪ ಮೇಟಿ ಹಾಗೂ ಪ್ರೇಶರ ಕುಕ್ಕರ ಗುರುತಿನ ವಿಜಯಕುಮಾರ ಜಯಪ್ಪ ಬಡಿಗೇರ,

ಅವರು ಇಂದು ಸ್ವತಃ ತಾವೇ ಯೋಚನೆ ಮಾಡಿ ಮೊದಲನೇಯ ಪೆನಲ್ ನ ಸತೀಶ ಓಸ್ವಾಲ ಅವರ ಪೆನಲ್ ಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಅವರೆ ಸ್ವತಃ ಯಾರ ಒತ್ತಡಕ್ಕೆ ಒಳಗಾಗದೆ ಸ್ವಯಿಚ್ಚೆಯಿಂದ ಈ ಪೆನಲ್ ಗೆ ಬೆಂಬಲ ಸೂಚಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕನ ಹಾಲಿ ಅಧ್ಯಕ್ಷರಾದ ಸತೀಶ ಓಸ್ವಾಲ, ಗುತ್ತಿಗೆದಾರರಾದ ನಾರಾಯಣ ಸ್ವಾಮಿ, ಮಲ್ಲಿಕಾರ್ಜುನ ಮದರಿ , ಶರಣಯ್ಯ ಬೂದಿಹಾಳಮಠ, ಪ್ರಭುರಾಜ ಕಲಬುರ್ಗಿ, ರುದ್ರಪ್ಪ ಕಡಿ, ಅಶೋಕ ರೇವಡಿ, ವೆಂಕನಗೌಡ ಪಾಟೀಲ, ಶಶಿಕಾಂತ ಮಾಲಗತ್ತಿ, ಚನ್ನಪ್ಪಗೌಡ ಬಿರಾದಾರ ಸೇರಿದಂತೆ ಅನೇಕ ಬೆಂಬಲಿಗರ ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started