
ಸಿ ಎ ಎ ಮತ್ತು ಏನ್ ಆರ್ ಸಿ ಕಾಯ್ದೆ ಜಾರಿ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ಬಹುಜನ ಕ್ರಾಂತಿ ಮೋರ್ಚಾ, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳು ನೀಡಿದ ಅಥಣಿ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಅಂಗಡಿ ಮುಂಗಟ್ಟುಗಳು ವಹಿವಾಟು ಸ್ಥಗಿತಗೊಳಿಸಿದ್ದು ಕಂಡು ಬಂತು
ಅಥಣಿ ಪಟ್ಟಣದ ಸಂಕೇಶ್ವರ್ ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಇರುವ ಅಂಬೇಡ್ಕರ ಸರ್ಕಲ್ ನಲ್ಲಿ ಸಮಾವೇಶಗೊಂಡ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರರು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವೆಲ್ಲ ಸಹೋದರತ್ವದಿಂದ ಬದುಕು ಸಾಗಿಸುತ್ತಿದ್ದು ಜಾತಿ ಸಂಘರ್ಷ ಹೊತ್ತಿಸುವ ಕಾಯಿದೆ ನಮಗೆ ಬೇಕಾಗಿಲ್ಲ.ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳಿದ್ದಂತೆ, ದೇಶದಲ್ಲಿ ಇರುವ ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಹಸಿವು, ಬಡತನ, ಹಾಗೂ ನಿರುದ್ಯೋಗವನ್ನ ತೊಲಗಿಸುವ ಕಾಯಿದೆ ನಮಗೆ ಅಗತ್ಯ ಇದೆ, ಜನಪರ ಆರ್ಥಿಕ ನೀತಿಯ ಅಗತ್ಯ ಇದೆ ಕುಸಿಯುತ್ತಿರುವ ಜಿಡಿಪಿ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯ ಇದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಸಚೀನ ಕಾಂಬಳೆ ಚಿಕ್ಕೋಡಿ
Published by Royal TV
Royal tv Kannada news online website channel
View more posts