ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಸರ್ಕಾರಿ ಶಾಲಾ ವಿಧ್ಯಾರ್ಥಿಗಳಿಗೆ ಬಹುಮಾನ

ಬೆಳಗಾವಿ ಜಿಲ್ಲೆಯ ಅಥಣಿ ವರದಿ:

ಬೆಳಗಾವಿ ಜಿಲ್ಲಾ ಸ್ವಿಪ್ ಸಮೀತಿ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ರಾಷ್ಟ್ರೀಯ ಮತದಾರರ ನಿಮಿತ್ಯ ಹಮ್ಮಿಕೊಂಡ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿಲ ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ(ಇಂಗ್ಲಿಷ್)ನಲ್ಲಿ ವಿಕಾಸ ಡಿ ಕಾಂಬಳೆ-ಪ್ರಥಮ ಸ್ಥಾನ,ದ್ವೀತಿಯ ಸ್ಥಾನ-ಅಪ್ಸಾನಾ ಗು.ಜಮಾದಾರ ಪಡೆದುಕೊಂಡಿದ್ದಾರೆ.

ಯೋಜನಾ ನಿರ್ದೇಶಕರ ಕಛೇರಿ,ಬಾಲಕಾರ್ಮಿಕ ಯೋಜನೆ ಬೆಳಗಾವಿ ಇವರು ಹಮ್ಮಿಕೊಂಡ ಬಾಲಕಾರ್ಮಿಕ ಪದ್ದತಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಅಥಣಿ ತಾಲೂಕಿಗೆ ಅನುಗ್ರಹಾ ಪೂಜಾರಿ-ಪ್ರಥಮ ಸ್ಥಾನ,ಯೋಗೇಶ ಸುಲಾರೆ-ದ್ವೀತಿಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.ಈ ವಿದ್ಯಾರ್ಥಿಗಳನ್ನು ಊರಿನ ಹಿರಿಯರು,ಪ್ರಾಚಾರ್ಯರು ಹಾಗೂ ಉಪನ್ಯಾಸಕರು ವೃಂದದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

ವರದಿ:ಸಚೀನ ಕಾಂಬಳೆ ಚಿಕ್ಕೋಡಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started