
ಕಾಗವಾಡ ವರದಿ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ 38ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಚಾಲನೆ ನೀಡಿದರು.
ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಮಂತ ತಾತ್ಯಾ ಪಾಟೀಲ ಅವರ ಅನುದಾನದಲ್ಲಿ ಮಂಜೂರಾದ ಐನಾಪುರ ಪಟ್ಟಣದ ಐನಾಪುರ ಮೋಳೆ ರಸ್ತೆಯಿಂದ ಶಾಂತು ಉಗಾರೆ ತೋಟದವರೆಗೆ ರಸ್ತೆ ಅಭಿವೃದ್ಧಿ 4 ಕಿಮೀ ಸುಮಾರು 20 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಹಾಗೂ ಐನಾಪುರ ಗ್ರಾಮದ ಕಾತ್ರಾಳ ರಸ್ತೆಯಿಂದ ಶಾಂತಿನಾಥ ಮಾಲಗಾವೆ ಅವರ ತೋಟದ ವರೆಗೆ ಸುಮಾರು 18 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಾಸಕರ ಅನುಪಸ್ಥಿತಿಯಲ್ಲಿ ಐನಾಪುರ ಗ್ರಾಮದ ಹಲವಾರು ಮುಖಂಡರ ನೇತೃತ್ವದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತ್ತು.
ಈ ಸಂದರ್ಭದಲ್ಲಿ ಮುಖಂಡರಾದ ದಾದಾ ಪಾಟೀಲ,ಶಿವಗೌಡಾ ಪಾರಶೆಟ್ಟಿ, ರಾಜೇಂದ್ರ ಪೋತದಾರ,ರತನ ಪಾಟೀಲ,ಹನಮಂತ ಪೂಜಾರಿ, ಗೋಪಾಲ ಮಾಲಗಾವೆ,ಸುರೇಶ ಗಾಣಿಗೇರ,ರಾಜು ಮಾನೆ, ವಿಜಯ ನಿಕಮ,ಸಿದ್ದು ಜಾಧವ ಮತ್ತು ಗುತ್ತಿಗೆದಾರರು,ಹಾಗೂ ಹಲವಾರು ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಸಚೀನ ಕಾಂಬಳೆ
Published by Royal TV
Royal tv Kannada news online website channel
View more posts