ಸಾಲದ ಬಾಧೆಯಿಂದ ರೈತ ಆತ್ಮಹತ್ಯೆ

ವಿಜಯಪುರ ಬ್ರೇಕಿಂಗ್ ನ್ಯೂಸ್.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಢವಳಾರ ಗ್ರಾಮದ ರೈತನಾದ ಚಂದ್ರಶೇಖರ್.ಶರಣಪ.ಹೊಸಮನಿ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತನು ಗ್ರಾಮೀಣ ಬ್ಯಾಂಕ್ ಗೋಲಗೇರಿ 3.5 ಲಕ್ಷ ಹಾಗೂ ಸೊಸೈಟಿಯಲ್ಲಿ 47000 ಸಾಲ ಮಾಡಿದ್ದು ಹಾಗೂ ವಿವಿಧ ಬ್ಯಾಂಕ್ ಒಟ್ಟು 10 ಲಕ್ಷ ಸಾಲ ಮಾಡಿದ್ದು, ಬೆಳೆದ ಬೆಳೆ ಕೈಗೆ ಸಿಗದೆ ಕಂಗಾಲಾಗಿದ್ದನೆಂದು ತಿಳಿದು ಬಂದಿದೆ.

ಹೆಂಡತಿ ಹೆಸರಿನಲ್ಲಿದ್ದ ಐಸಿಐಸಿ ಬ್ಯಾಂಕಿನಿಂದ ಸಾಲದ ನೋಟಿಸ್ ಕೂಡ ಬಂದಿತ್ತು. ಅಲ್ಲದೆ ಈತನಿಗೆ ಮೂರುಜನ ಮಕ್ಕಳಿದ್ದು ಎರಡು ಗಂಡು ಒಂದು ಹೆಣ್ಣು ಇದೆ ಎಂದು ತಿಳಿದು ಬಂದಿದೆ.

ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ

Published by Royal TV

Royal tv Kannada news online website channel

Leave a comment

Design a site like this with WordPress.com
Get started