ಶಾಲೆ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಶಿಕ್ಷಕರು.

ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ಶಾಲೆಯ ಮಕ್ಕಳು ಶಾಲೆಯಲ್ಲಿ ಆಳಾಗಿ ದುಡಿಯುತ್ತಿರುವ ಮಕ್ಕಳು ಮಾನ್ಯ ಶಿಕ್ಷಣ ಸಚಿವರೆ ನೀವು ನೋಡಬೇಕಾಗಿದೆ ಈ ಸುದ್ದಿ.

ಅಥಣಿ: ತಾಲೂಕಿನ ಶಾಲಾ ಮಕ್ಕಳನ್ನು ಕೆಲಸಕ್ಕೆ ಹಚ್ಚಿದ ಶಿಕ್ಷಕರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಪ್ರಾಥಮಿಕ ಸರಕಾರಿ ಶಾಲೆ ಯಲ್ಲಿ ಅ ಮಾನವೀಯ ಘಟನೆ ನಡೆದಿದೆ.

ಮಕ್ಕಳಿಗೆ ಪಾಠಹೇಳಿ ಕೊಡುವ ಸಮಯದಲ್ಲಿ ಕೆಲಸಕ್ಕೆ ಹಚ್ಚಿ ಬಂಡ ತಣವನ್ನು ಮೆರೆದ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯ.

ಸುಮಾರು ದಿನಗಳಿಂದ ಕೋಣೆ ಗಳಲ್ಲಿ ಬಿದ್ದ ರಾಶಿ ರಾಶಿ ಹಂಚುಗಳನ್ನ ತೆಗೆಯಲು ಹೇಳಿ ಬೇಜವಾಬ್ದಾರಿ ತನವನ್ನ ಮೆರೆದಿದ್ದಾರೆ.. ಹಳೆಕಟ್ಟದಿಂದ ಬೆರೆ ಕಡೆ ಸ್ಥಳಾಂತರ ಮಾಡುತ್ತಿರುವ ಪುಟ್ಟ ಪುಟ್ಟ ವಿದ್ಯಾರ್ಥಿಗಳು.

ಇಲ್ಲಿ ಏನಾದರೂ ಹುಳು, ಹಾವು,ಚೇಳು ಕಚಿದ್ರೆ , ಏನು ಗತಿ ಎಂಬುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ಬಡ ವಿದ್ದ್ಯಾರ್ಥಿಗಳು ಪಾಠ ಕಲಿಯಲು ಸರಕಾರಿ ಶಾಲೆಗೆ ಬಂದ್ರೆ ಶಿಕ್ಷಕರು ಇಲ್ಲಿ ಕೆಲಸಕ್ಕೆ ಹಚ್ಚುತ್ತಿದ್ದಾರೆ.

ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ತಾಲೂಕಿನ ಅನೇಕ ಶಾಲೆಗಳಲ್ಲಿ ಕೆಲವು ಶಿಕ್ಷಕರು ಮಕ್ಕಳನ್ನು ಕೆಲಸಕ್ಕೆ ಬಳಿಸಿಕೊಂಡ , ಸರ್ಕಾರದಿಂದ ಶಾಲೆಗಳ ಸುಧಾರಣೆಗೆ ಹಾಗೂ ಕೆಲವು ಕೆಲಸಗಳಿಗೆ ಹಣ ಸಂದಾಯ ಮಾಡುತ್ತದೆ, ಇದನ್ನು ದೋಚಲು ಕೆಲವು ಶಿಕ್ಷಕರು ಈ ರೀತಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಆರೋಪ ಮಾಡುತ್ತಿದ್ದಾರೆ, ಸಾರ್ವಜನಿಕರು.

ವರದಿ:ಸಚೀನ ಕಾಂಬಳೆ

Published by Royal TV

Royal tv Kannada news online website channel

Leave a comment

Design a site like this with WordPress.com
Get started