ವಿಜಯಪುರ ಜಿಲ್ಲೆಯ ಸುದ್ದಿ:

ನೂತನ ಕಾ ನಿ ಪ ಸಂಘದ ಅಧಿಕಾರಿ ಸ್ವೀಕರಿಸಿ ಸುಕ್ಷೇತ್ರ ಯಲಗೂರಿನ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆದರು. ಮರಿಕಾರ್ತಿಕೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಸಮೀತಿ ವತಿಯಿಂದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ ಸಚೇಂದ್ರ ಲಂಬು ಅವರನ್ನು ಸಮಿತಿ ಅಧ್ಯಕ್ಷ ಅನಂತ ಓಂಕಾರ ಸತ್ಕರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಘದ ಗ್ರಾಮೀಣ ಭಾಗದ ಉಪಾಧ್ಯಕ್ಷರಾದ ಶ್ರೀ ಡಿ.ಬಿವಡವಡಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀ ದೇವೇಂದ್ರ ಹೆಳವರ, ಪ್ರಧಾನ ಕಾರ್ಯದರ್ಸಿ ಶ್ರೀ ವಿನಾಯಕ ಸೊಂಡೂರ ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಬಾಬು ಮುರಾಳ ಅವರನ್ನೂ ಸತ್ಕರಿಸಿದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts