
ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ದೇಶ ವ್ಯಾಪ್ತಿಯಲ್ಲಿ ಕೊರೋನ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ರವಿವಾರ ದಿನವಾದ ಇಂದು ಹಮ್ಮಿಕೊಂಡ ಜನತಾ ಕರ್ಫ್ಯೂ ಸ್ವಯಂಘೋಷಿತ ಬಂದ್ ಯಶಸ್ವಿಯಾಗಿದೆ.

ವಿಜಯಪುರ ಸೇರಿದಂತೆ ಜಿಲ್ಲೆಯ ಮುದ್ದೇಬಿಹಾಳ,ಬಸವನಬಾಗೇವಾಡಿ,ತಾಳಿಕೋಟಿ, ಸಿಂದಗಿ, ಇಂಡಿ ಸೇರಿದಂತೆ ಅನೇಕ ತಾಲೂಕಿನಲ್ಲಿ ಬಂದಗೆ ಸಾರ್ವಜನಿಕರ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಬಸ್ ನಿಲ್ದಾಣ ಬಜಾರ್ ಅಂಗಡಿ-ಮುಂಗಟ್ಟುಗಳು ವಾಹನ ಸಂಚಾರ ಸೇರಿದಂತೆ ಎಲ್ಲವೂ ಯಶಸ್ವಿಯಾಗಿ ಬಂದ್ ಆಗಿವೆ.

ಇದರ ಜೊತೆಯಲ್ಲಿ ಜನರು ಅಕ್ಕಪಕ್ಕದ ಮನೆಯಲ್ಲಿ ಹೋಗುವುದು ಜನರೊಂದಿಗೆ ಬೆರೆಯುವುದು ಸದ್ಯಕ್ಕೆ ನಿಲ್ಲಿಸಬೇಕು. ಸರ್ಕಾರ ಕೈಗೊಂಡಿರುವ ಈ ಕಠಿಣ ಕ್ರಮಕ್ಕೆ ಎಲ್ಲರೂ ಬದ್ಧರಾಗಿ ಬಿರುಗಾಳಿಯಂತೆ ನುಗ್ಗುತ್ತಿರುವ ಕೊರೋನ ವೈರಸ್ ಗೆ ಕಡಿವಾಣ ಹಾಕಿ ದೇಶದಿಂದ ಹೊರದಬ್ಬಿಸುವ ಕೆಲಸ ಎಲ್ಲ ಜನತೆ ಹಾಗೂ ನಾವು ನೀವು ಸೇರಿಕೊಂಡು ಮಾಡಿದರೆ, ಅದರ ನಿರ್ಮೂಲನೆ ಸಾಧ್ಯವಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದೆ ಇದು ರಾಯಲ್ ಟಿವಿ ನ್ಯೂಸ್ ನ ಕಳಕಳಿ ಸಾರ್ವಜನಿಕರೆ ನಿರ್ಲಕ್ಷ್ಯ ಮಾಡಬೇಡಿ ಜೀವ ಅಮೂಲ್ಯವಾದದ್ದು.

