ವಿಶ್ವ ಗುಬ್ಬಚ್ಚಿ ದಿನ ಹಸಿರು ತೋರಣದಿಂದ ಮಾನವೀಯ ಕಾರ್ಯ ಮಣ್ಣಿನ ಮುಚ್ಚಳಗಳ ವಿತರಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ : ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲದ ಉಳಿವಿಗೆ ನಾವೆಲ್ಲರೂ ಸ್ವಲ್ಪಮಟ್ಟಿಗಾದರೂ ಕೆಲಸ ಮಾಡಬೇಕಿದೆ ಎಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಶೋಕ ರೇವಡಿ ಹೇಳಿದರು. ಅವರು ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ ವಿಶ್ವ ಗುಬ್ಬಚ್ಚಿ ದಿನ ಹಾಗೂ ವಿಶ್ವ ಅರಣ್ಯ ದಿನಾಚರಣೆ ನಿಮಿತ್ಯ ಪಕ್ಷಿಗಳಿಗೆ ನೀರುಣಿಸುವ ಮಣ್ಣಿನ ಮುಚ್ಚಳಗಳನ್ನು ವಿತರಿಸಿ ಮಾತನಾಡಿದರು.

ನಾವು ಸಣ್ಣವರಿದ್ದಾಗ ನಮ್ಮ ಮನೆಯಂಗಳದಲ್ಲೇ ಗುಬ್ಬಿಗಳು ಗೂಡು ಕಟ್ಟಿ, ಮೊಟ್ಟೆಗಳನ್ನಿಟ್ಟು, ಮರಿ ಮಾಡಿ, ನಾವು ಹಾಕಿದ ಕಾಳು ಕಡಿ ತಿನ್ನುತ್ತ ಇದ್ದವು, ಈಚೆಗೆ ಅವುಗಳು ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿವೆ. ನಾವು ಗಿಡಮರಗಳನ್ನು ಕಡಿಯುತ್ತ ಇರುವುದು ಅವುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಜೊತೆಗೆ ಕಾಂಕ್ರೀಟ್ ಮನೆಗಳಲ್ಲಿ ಅವುಗಳ ಸಂತಾನ ಬೆಳೆಯುತ್ತಿಲ್ಲ, ನಾವು ಆಸಕ್ತಿ ವಹಿಸಿ ಗುಬ್ಬಿಗಳಿಗೆ, ಪಕ್ಷಿಗಳಿಗೆ ಮನೆಗಳ ಮೇಲ್ಮಹಡಿಗಳಲ್ಲಿ ಗೂಡು ನಿರ್ಮಿಸಬೇಕು. ಅವುಗಳಿಗೆ ಕಾಳು ಕಡಿ ಹಾಕಿ, ನೀರೂ ಸಮೀಪದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು. ಆಸಕ್ತಿಯಿಂದ ಯಾರೇ ಕೇಳಿದರೂ ಮಣ್ಣಿನ ಪಾತ್ರೆಗಳನ್ನು ಹಸಿರು ತೋರಣ ಬಳಗ ಉಚಿತವಾಗಿ ವಿತರಿಸಲಿದೆ ಎಂದರು. ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ: ಅರಣ್ಯ ಹಾಗೂ ಪಕ್ಷಿ ಸಂಕುಲ ಒಂದಕ್ಕೊಂದು ಪೂರಕವಾಗಿವೆ. ಗಿಡ, ಮರಗಳು ಇದ್ದರೆ ಮಾತ್ರ ಪಕ್ಷಿ ಸಂಕುಲ ಉಳಿಯುತ್ತದೆ. ವೈಜ್ಞಾನಿಕ ಸಂಶೋಧನೆಯಂತೆ ಮೊಬೈಲ್ ವಿಕಿರಣಗಳು (ತರಂಗ)ಗಳಿಂದಾಗಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆಯಂತೆ. ಆದರೆ ಮನುಷ್ಯ ಮನಸ್ಸು ಮಾಡಿದರೆ ಮನೆಯಂಗಳದಲ್ಲಿ ಪಕ್ಷಿಗಳು ಗೂಡುಕಟ್ಟಿಕೊಳ್ಳುವಂತೆ ಮಾಡಬಹುದು, ಇದು ಮಕ್ಕಳಿಗೆ ಖುಷಿ ಕೊಡುತ್ತದೆ ಎಂದರು. ಕಾರ್ಯಕ್ರಮದ ಅಂಗವಾಗಿ ಹಸಿರು ತೋರಣ ಉದ್ಯಾನವನದಲ್ಲಿ ಹಾಗೂ ಮಾರುತಿ ನಗರದಲ್ಲಿರುವ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಅಲ್ಲಲ್ಲಿ ಮಣ್ಣಿನ ಮುಚ್ಚಳಗಳನ್ನು ಮಣ್ಣಲ್ಲಿ ಇಟ್ಟು ನೀರು ಹಾಗೂ ಕಾಳುಗಳನ್ನು ಹಾಕಲಾಯಿತು. ಹಾಗೂ ಆಸಕ್ತರಿಗೆ ಮಣ್ಣಿನ ಮುಚ್ಚಳಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ ವಕೀಲರು, ಉಪಾಧ್ಯಕ್ಷ ಎಲ್.ಎಂ.ಚಲವಾದಿ, ಕಾರ್ಯದಶರ್ಿ ರಾಜಶೇಖರ ಕಲ್ಯಾಣಮಠ, ಬಿ.ಎಸ್.ಮೇಟಿ, ಬಿ.ಎಂ.ಪಲ್ಲೇದ, ಜೆಸಿ ಸಂಸ್ಥೆ ಅಧ್ಯಕ್ಷ ರವಿ ಗೂಳಿ, ಎಚ್.ವೈ.ಪಾಟೀಲ ವಕೀಲರು, ರವಿ ತಡಸದ, ವೆಂಕನಗೌಡ ಪಾಟೀಲ, ಪರಶುರಾಮ ಢವಳಗಿ, ಮಲ್ಲಿಕಾರ್ಜುನ ಬಾಗೇವಾಡಿ, ಬಿ.ಎ.ನಾಡಗೌಡ ವಕೀಲರು, ಕಿರಣ ಕಡಿ, ಡಾ.ವೀರೇಶ ಇಟಗಿ, ಡಾ.ಚಂದ್ರಶೇಖರ ಶಿವಯೋಗಿಮಠ, ಡಾ.ವೀರೇಶ ಪಾಟೀಲ, ಬಸವರಾಜ ಹೊನಕೇರಿ ವಕೀಲರು, ಕೂಡಗಿ, ವಿಜಯಕುಮಾರ ಕಡಿ, ಬಿ.ಎಚ್.ಬಳಬಟ್ಟಿ, ಶ್ರೀಕಾಂತ ಹಡಲಗೇರಿ, ಜಿ.ಎಂ.ಹುಲಗಣ್ಣಿ, ಶಿವನಗೌಡ ಪಾಟೀಲ, ವಿಲಾಸ ದೇಶಪಾಂಡೆ, ಪಾಲಾಕ್ಷಿಗೌಡ ಪೊಲೀಸ್ ಪಾಟೀಲ, ಸುನೀಲ ಕಳಸಾ, ವೀರೇಶ ಹಂಪನಗೌಡರ, ಬಸವರಾಜ ಬೂದಿಹಾಳ, ಮತ್ತಿತರರು ಇದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started