ಜನತಾ ಕರ್ಪ್ಯೂ ಪಾಲಿಸುವಂತೆ ಕಾಶೀಬಾಯಿ ರಾಂಪೂರ ಅವರಿಂದ ಮನವಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೋನ ವೈರಸ್ ನಿಯಂತ್ರಣ ಕುರಿತು ಇದೇ ಭಾನುವಾರ ದೇಶಾದ್ಯಂತ ಕರೆ ನೀಡಿದ ಜನತಾ ಕರ್ಪ್ಯೂ ಅನ್ನು ಮುದ್ದೇಬಿಹಾಳ ತಾಲೂಕಿನಾದ್ಯಂತ ಇರುವ ಜನರು ಬೆಂಬಲಿಸಬೇಕು, ಎಂದು ಸಮಾಜಸೇವಕಿ ಹಾಗೂ ಬಿಜೆಪಿ ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ಎಸ್ ರಾಂಪುರ್ ವಿನಂತಿಸಿಕೊಂಡಿದ್ದಾರೆ.

ದೇಶದಲ್ಲಿ ಕೊರೋನ ನಿಯಂತ್ರಣಕ್ಕೆ ಭಾನುವಾರ ಬೆಳಿಗ್ಗೆ 7ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಬರಬಾರದು ಅಲ್ಲದೆ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ದೇಶದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅವರ ಮಾತಿಗೆ ಸಹಕರಿಸಬೇಕು ಎಂದು ಹೇಳಿದರು.

ಮೂಲತಹಃ ಚೀನಾ ದೇಶದಿಂದ ಆರಂಭವಾದ ಈ ರೋಗವು ಎಲ್ಲ ರಾಷ್ಟ್ರಗಳಲ್ಲಿ ವ್ಯಾಪಿಸಿಕೊಂಡಿದೆ ಅಮೇರಿಕಾ, ಇಟಲಿ, ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ಸಾಕಷ್ಟು ಅವಸರದಲ್ಲಿ ಈ ರೋಗ ಹರಡುತ್ತಿದೆ ಆದರೆ ಭಾರತದಲ್ಲಿ ಕೇಂದ್ರಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗವು ಹರಡದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ರೋಗದ ಬಗ್ಗೆ ಜಾಗೃತಿ ವಹಿಸಬೇಕಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು ಬಿಡಬೇಕು ಮೋದಿಯವರ ಆಜ್ಞೆಯನ್ನು ಪಾಲಿಸಬೇಕು ಎಂದು ಕಾಶೀಬಾಯಿ ರಾಂಪೂರ ಹೇಳಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ನಮ್ಮನ್ನು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started