ಕೃಷಿ ಹೊಂಡದಲ್ಲಿ ಬಿದ್ದು ಬಾಲಕರು ಸಾವು

ಈಜಲು ಹೋದ ಬಾಲಕರಿಬ್ಬರು ಮೃತ ಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಹೊರವಲಯದಲ್ಲಿರುವ ಕುಮಾರಪ್ಪ ಮಡಿವಾಳಪ್ಪ ಕೋರಿ ಅವರ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಘಟನೆ ಸಂಭವಿಸಿದೆ.

ಶಾಲೆ ರಜೆ ಇದ್ದ ಕಾರಣ ಐದು ಮಕ್ಕಳು ಸೇರಿಕೊಂಡು ಈಜಲು ಈ ಕೃಷಿ ಹೊಂಡಕ್ಕೆ ಹೋಗಿದ್ದಾರೆ,ಎನ್ನಲಾಗಿದೆ ಇವರಲ್ಲಿ ಇಬ್ಬರು ಹೊರಗಡೆ ಬಂದಿದ್ದು ಒಬ್ಬ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಇಬ್ಬರು ಬಾಲಕರು ಸಾವನ್ನಪ್ಪಿದ್ದು ಅಮಿತ್ ಟಕ್ಕಳಕಿ (11 ವರ್ಷ ಸಿದ್ದರಾಮಪ್ಪ ಗೌಡ ಮುದುಕಪ್ಪ ಬಿರಾದಾರ್ (12) ವರ್ಷ ದ ಮೃತ ದುರ್ದೈವಿ ಗಳಾಗಿದ್ದಾರೆ. ಇತ್ತ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ ಘಟನೆಗೆ ಢವಳಗಿ ಗ್ರಾಮವೇ ಮೌನವಾಗಿದೆ.

ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started