
ವಿಜಯಪುರ: ಜಿಲ್ಲಾ ಆಡಳಿತದಿಂದ ದೇಶಕ್ಕೆ ಮಾದರಿಯಾಗಬಲ್ಲ ಮಾನವೀಯತೆಯ ಕೆಲಸ ಮಾಡಿದ್ದಾರೆ. ರಾಜಸ್ಥಾನ ದಿಂದ ವಲಸೆ ಬಂದ ಕಾರ್ಮಿಕರು ಬೆಂಗಳೂರಿನಿಂದ ಹೋಗುವಾಗ ಅವರು ವಿಜಯಪುರದ ಸರಹದ್ದಿನಲ್ಲಿ ಸಿಲುಕಿಕೊಂಡಿದ್ದರು,ಅವರು ರಾಜಸ್ಥಾನಕ್ಕೆ ತೆರಳಲು ಪರದಾಡುತ್ತಿದ್ದರು ಅವರ ಸಮಸ್ಯೆಯನ್ನು ಅರಿತು ಅವರ ರಾಜ್ಯಕ್ಕೆ ಕಳಿಸಲು ಬಸ್ ವ್ಯವಸ್ಥೆಯನ್ನು ವಿಜಯಪುರದ ಜಿಲ್ಲಾ ಅಧಿಕಾರಿ ವೈ ಎಸ್ ಪಾಟೀಲ ಅವರು ಸರ್ಕಾರದ ಜೊತೆ ಚರ್ಚೆ ಮಾಡಿ ಅವರ ಊರುಗಳಿಗೆ ತಲುಪಲು ಸಹಾಯ ಮಾಡಿ ದೇಶವ್ಯಾಪ್ತಿಯಲ್ಲಿ ಮಾನವೀಯತೆಯನ್ನು ಮೆರದಿದ್ದಾರೆ.

ಇನ್ನೂ ಆ ಜನರು ರಾಜಸ್ಥಾನಕ್ಕೆ ತಲುಪಲು ಏಳು ಜನ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಜನರನ್ನು ಗೋವಾ ಮಹಾರಾಷ್ಟ್ರದಲ್ಲಿ ಹೊರ ಹಾಕುತ್ತಿದ್ದರು ನಮ್ಮ ಕರ್ನಾಟಕದ ಹೆಮ್ಮೆಯ ಅಧಿಕಾರಿಗಳು ಈ ರೀತಿಯಲ್ಲಿ ಮಾನವೀಯತೆಯನ್ನು ನೋಡಿದರೆ ನಿಜಕ್ಕೂ ಹೊರ ರಾಜ್ಯದ ಜನತೆಗೆ ಹಾಗೂ ಕನ್ನಡದವರ ಮೇಲೆ ದಬ್ಬಾಳಿಕೆಯ ಮಾಡುತ್ತಿರುವವರಿಗೆ ಅಸಹ್ಯ ಆಗಬೇಕು ಅದರಂತೆ ಇಂತಹ ವಿಜಯಪುರದ ವೈ ಎಸ್ ಪಾಟೀಲ ಜಿಲ್ಲಾ ಅಧಿಕಾರಿಯಂತವರ ಕಾರ್ಯ ವೈಕರಿಯಿಂದ ಬುದ್ದಿ ಕಲಿಯಬೇಕು ನೆರೆಯ ರಾಜ್ಯದ ಜನತೆ ಇನ್ನಾದರೂ ಮಾನವೀಯತೆ ಇಂದ ನಡೆದುಕೊಳ್ಳಬೇಕು ನಮ್ಮಂತೆಯೇ ಅವರ ಜೀವನವು ಕೂಡ ಎಂಬ ಅರಿವು ಮೂಡಿದರೆ ಸಾಕು.
ರಾಯಲ್ ಟಿವಿ ನ್ಯೂಸ್ ವಿಜಯಪುರ-ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts