
ವಿಜಯಪುರ:ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಸಭೆ ನಡೆಸಿದ ಐವರು ಹಾಗೂ ಅವರ ಜೊತೆಗಿದ್ದ ಐವರು ಮಹಿಳೆಯರು ವಿಜಯಪುರ ದಲ್ಲಿ ವಾಸವಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದ್ದಾರೆ. ಈಗಾಗಲೇ ಹತ್ತು ಜನರ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಪತ್ತೆ ಹಚ್ಚಿದ್ದಾರೆ.
ಅಲ್ಲದೇ ಈಗಾಗಲೇ ಪಶ್ಚಿಮ ಬಂಗಾಲ ಮೂಲದ ಹತ್ತು ಜನರು ಮಾರ್ಚ 3 ಕ್ಕೆ ಪಶ್ಚಿಮ ಬಂಗಾಲದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಅವರು ಮಾರ್ಚ್ 4 ಕ್ಕೆ ದೆಹಲಿ ತಲುಪಿ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಆ ಹತ್ತು ಜನರ ತಂಡವು ಮಾರ್ಚ 10 ರಂದು ವಿಜಯಪುರ ಜಿಲ್ಲೆ ತಲುಪಿದೆ. ಬಳಿಕ ನಗರದ ಕೆಲವು ಕಡೆಗಳಲ್ಲಿ ಸಭೆ ನಡೆಸಿದ್ದಾರೆ. ಈ ಎಲ್ಲರ ಮಾಹಿತಿ ಕಲೆ ಹಾಕಿ ಆರೋಗ್ಯ ಇಲಾಖೆ ಅವರವರ ಮನೆಗಳನ್ನು ನಿಗಾದಲ್ಲಿರಿ ಸಿದ್ದಾರೆ. ಹಾಗೆ ಆ ಎಲ್ಲ ಹತ್ತು ಜನರ ಗಂಟಲು ದ್ರವ್ಯ ಮಾದರಿಯನ್ನು ಸಂಗ್ರಹಿಸಿ ದ್ರವ್ಯ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.
ಈ ಎಲ್ಲರ ಪರೀಕ್ಷಾ ವರದಿ ಬಳಿಕ ಕೊರೊನಾ ಪಾಸಿಟಿವ್, ನೆಗೆಟಿವ್ ಬಗ್ಗೆ ಮಾಹಿತಿ ಸಿಗಲಿದೆ. ಇನ್ನು ಇವರ ಸಂಪರ್ಕ ಹೊಂದಿದ 23 ಜನರಿಗೂ ಮನೆ ನಿಗಾ ವಹಿಸಿ ಮುಂಜಾಗೃತಾ ಕ್ರಮವಾಗಿ ಮನೆ ನಿಗಾದಲ್ಲಿ ಇರಿಸಲಾಗಿದೆ. ಅವಶ್ಯ ಬಿದ್ದರೆ ಅವರ ಗಂಟಲು ದ್ರವ್ಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ.ಅಲ್ಲದೇ ಇಂಡೋನೇಷ್ಯಾ ಹಾಗೂ ಮಲೇಷಿಯಾ ದೇಶ ಪ್ರವಾಸ ಮಾಡಿ ವಾಪಸ್ ಬಂದ ಮೂವರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ವಿಜಯಪುರದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾಹಿತಿ ಹೇಳಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ,ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts