ಮಾನವೀಯತೆ ಮೆರೆದ ಡಿ.ವೈ.ಎಸ್ಪಿ ಶಾಂತವೀರ

ವಿಜಯಪುರ:ಇಡಿ ಜಗತ್ತನ್ನೆ ಅಲ್ಲೊಲ ಕಲ್ಲೋಲ ಮಾಡಿದ ಕೋವಿಡ್-19 ಸೋಂಕು ರೋಗಕ್ಕೆ ಸಹಾಯಾರ್ಥವಾಗಿ ಹಗಲಿರುಳು ಲಾಠಿ ಹಿಡಿದು ಕರ್ತವ್ಯ ಮಾಡುತ್ತಿರುವ ಪೊಲೀಸರು ಹಾಗೂ ಪೋಲಿಸ್ ಅಧಿಕಾರಿಗಳು ಇಂತಹ ಮಾನವೀಯ ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ.

ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ವಿನೂತನ ರೀತಿಯಲ್ಲಿ ಶಿಕ್ಷೆಗಳನ್ನು ನೀಡುತ್ತಿದ್ದ ಪೊಲೀಸರು ಈಗ ಅವರ ಸ್ವತಃ ಮಾನವೀಯತೆಯ ಗುಣದಿಂದ ತಮ್ಮ ಸಹಕಾರ‌ ನೀಡುತ್ತಾ ಬರುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪ ವಿಭಾಗದ ಡಿ ವಾಯ್ ಎಸ್ಪಿ ಶಾಂತವೀರ ಅವರು ತಮ್ಮ ಕರ್ತವ್ಯ ನಿರತದ ಮಾಸಿಕ ವೇತನವನ್ನು ಕೊರೋನ ಸೋಂಕು ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು ದೇಣಿಗೆ ನೀಡಿದ್ದಾರೆ.

ಈ ಕುರಿತು ವಿಜಯಪುರ ಜಿಲ್ಲೆಯ ಎಸ್ಪಿ ಅನುಪಮ ಅಗರವಾಲ ಅವರಿಗೆ ಏಪ್ರಿಲ್ 6 ರಂದು ಲಿಖಿತವಾಗಿ ಪತ್ರ ಬರೆದಿರುವ ಅವರು, ತಮ್ಮ ಏಪ್ರಿಲ್ ತಿಂಗಳ ವೇತನ 75 ಸಾವಿರ ರೂ. ಕಡಿತಮಾಡಿ ಸೋಂಕಿನ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು ಕೋರಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ-ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started