
ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 129 ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರು ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಇದೇ ಸಮಯದಲ್ಲಿ ಕಾಗವಾಡ ಪಟ್ಟಣದಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಸುಮಾರು 2000 ಬಡಜನರಿಗೆ, ದಿನನಿತ್ಯ ಉಪಯೋಗವಾಗುವ ತರಕಾರಿಗಳನ್ನು ವಿತರಿಸಿ ಕರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಕ್ಷೇತ್ರದ ಸಾರ್ವಜನಿಕರಿಗೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿದ್ದು ಯಾರು ಮನೆಯಿಂದ ಹೊರಗೆ ಬರದ ಹಾಗೆ ಸಹಕರಿಸಿ, ಸರ್ಕಾರದ ಆಜ್ಞೆಯನ್ನು ತಪ್ಪದೆ ಪಾಲಿಸಿ ನಾವು ಹಾಗೂ ನಮ್ಮ ಸರಕಾರ ಸದಾ ನಿಮ್ಮೊಂದಿಗಿದೆ ಎಂದರು.
ಈ ಸಂದರ್ಭದಲ್ಲಿ ಕಾಗವಾಡ ತಹಸಿಲ್ದಾರ್ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಶ್ರೀದೇವಿ ಚೌಗಲಾ, ತಾಲೂಕು ಪಂಚಾಯತ ಸದಸ್ಯರಾದ ದೇವನೆ, ಕಾಗವಾಡ ತಾಲ್ಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಾದ ಇರನಗೌಡಾ ಎಗನಗೌಡರ, ಕಾಗವಾಡ ಪಿಎಸ್ಐ ಹನುಮಂತ ಶಿರಹಟ್ಟಿ, ಗ್ರಾಮದ ಹಿರಿಯರಾದ ಸುಭಾಸ ಕಠಾರೆ, ಶೀತಲಗೌಡಾ ಪಾಟೀಲ, ಭರತ ಪಾಟೀಲ, ಬಾಳು ಕಾಂಬಳೆ, ಪ್ರಕಾಶ ಚೌಗಲೆ, ಸಚಿನ ಕವಟಗೆ, ವಿಠ್ಠಲ ಪವಾರ, ರಾಜು ವಡ್ಡರ, ಶ್ರೀ ವಿಲಾಸ ಚಿಪ್ಪರಗೆ, ದೀಪಕ ಕಾಂಬಳೆ, ಪ್ರಕಾಶ ದೊಂಡಾರೆ, ವಿಜಯ ಸಂಬಾಳೆ, ಜೀತು ಕಾಂಬಳೆ, ಹಾಗೂ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥರಿದ್ದರು.
ವರದಿ:ಸಚೀನ ಕಾಂಬಳೆ
ರಾಯಲ್ ಟಿವಿ ನ್ಯೂಸ್ ಬೆಳಗಾವಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts