ಅನ್ನದಾನೇಶ್ವರ ಶ್ರೀಗಳಿಂದ ಬಡವರಿಗೆ ನೆರವು

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಸಮೀಪದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿಯವರು ಶುಕ್ರವಾರ ದಂದು ಘಟಪ್ರಭಾ ಪಿ ಜಿ ಮಲ್ಲಾಪುರ ಗ್ರಾಮದಲ್ಲಿ ವಾಸವಿರುವ ಸಹಸ್ರಾರು ಅಲೆಮಾರಿ ಜನ ಹಾಗೂ ಬಡವರಿಗೆ ಊಟಕ್ಕೆ ಪಾಯಸಾ, ರೊಟ್ಟಿ, ಅನ್ನ ಸಾಂಬಾರು ಹಾಲು ಕಾಯಿಪಲ್ಲೆ ಸೇರಿದಂತೆ ಊಟದ ವ್ಯವಸ್ಥೆ ಮಾಡಿದರು.

ಲಾಕ್ ಡೌನ್ ಜಾರಿಯಾದಾಗಿನಿಂದಲೂ ದಿನಾಲು ಸಾವಿರಾರು ಜನರಿಗೆ ಅನ್ನದಾಸೋಹ ನಡಿಸುತ್ತಿದ್ದಾರೆ. ಲಾಕ್ ಡೌನ್ ಇರುವದರಿಂದ ಎಷ್ಟೋ ಅಲೆಮಾರಿ ಜನರು, ಬಡವರು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದ್ದು. ಮನುಷ್ಯನ ಜೀವನದಲ್ಲಿ ಯಾವದು ಶಾಶ್ವತವಲ್ಲ ನಾವು ಮಾಡಿದ ದಾನ ಧರ್ಮ ಶಾಶ್ವತ ಎಂಬುದು ಸಮಾಜಕ್ಕೆ ತೋರಿಸಿಕೊಟ್ಟು ಹಸಿವುನ್ನು ನಿಗಿಸಿ ಹಸಿದವರಿಗೆ ಅನ್ನದಾಸೋಹವನ್ನು ಸ್ವಂತ ಮಠದಿಂದಲೇ ಅಡುಗೆಯನ್ನು ಮಾಡಿಸಿ ಕೊರೋನಾ ವೈರಸ್ ರೋಗ ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ಸಾವಿರಾರು ಪೊಲೀಸ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ,ಆರೋಗ್ಯ ಇಲಾಖೆಯವರಿಗೆ, ಕಂದಾಯ ಇಲಾಖೆ, ಪತ್ರಕರ್ತರಿಗೆ,ಹಾಗೂ ಕೊರೋನಾ ಸೈನಿಕರಿಗೆ, ಅಲೆಮಾರಿ, ಬಡವ ಜನರಿದ್ದಲ್ಲಿಯೇ ಬಂದು ದಾಸೋಹ ನಡಿಸುತ್ತಿದ್ದಾರೆ. ಅನ್ನದಾನಕ್ಕೆ ಹೆಸರು ವಾಸಿಯಾದ ದಾನೇಶ್ವರ ದಾಸೋಹ ಕಾರ್ಯ ನಿಜಕ್ಕೂ ಮೆಚ್ಚುವಂತಹದು. ದಾಸೋಹ ಸೇವೆಯಲ್ಲಿ ಬಂಡಿಗಣಿ ಮಠದ ಭಕ್ತರು ಭಕ್ತಿ ಸೇವೆಯನ್ನು ಮಾಡುತ್ತಿದ್ದಾರೆ.

ವರದಿ:ಮುರಗೆಪ್ಪ ಮಾಲಗಾರ

ರಾಯಲ್ ಟಿವಿ ನ್ಯೂಸ್ ಬೆಳಗಾವಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started