ವಿಜಯಪುರ:ಕೊರೋನ ಸೋಂಕು ತಗುಲಿ ಲಾಕ್ ಡೌನ್ ನಿಂದಾಗಿ ರಾಜ್ಯದ ಜನತೆ ಹಸಿವಿನಿಂದ ಅನೇಕರು ಚಟಪಡಿಸುತ್ತಿದ್ದಾರೆ,ಇನ್ನೂ ಎಷ್ಟೋ ಜನರು ಅನೇಕ ಬಡ ಜನರಿಗೆ ಆಹಾರ ಧಾನ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ.ಹೀಗಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ1 ಕೋಟಿ ವೆಚ್ಚದಷ್ಟು ಆಹಾರ ದಾನ್ಯ,ಸೇರಿದಂತೆ ಊಟಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಂದು ಸ್ವತಃ ಮುಂದೆ ನಿಂತು ತಾವು ಅದರಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕಿಟ್ ತಯಾರಿಸಿ ಮುದ್ದೇಬಿಹಾಳದ ಸ್ಲಂ
ನಿವಾಸಿಗಳಿಗೆ ಕುಟುಂಬ ಸಮೇತವಾಗಿ ನಿಜವಾದ ಬಡವರಿಗೆ ತಲುಪಿಸುವಲ್ಲಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ, ಧರ್ಮಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ ದಾಸೋಹದಲ್ಲಿ ಪಾಲ್ಗೊಳ್ಳುವ ಮೂಲಕ ಬಡವರ ಪಾಲಿಗೆ ಆಶಾ ಕಿರಣ ವಾದರು,
ಇನ್ನೂ ಈ ಕಾರ್ಯವನ್ನು ಇಡಿ ಮುದ್ದೇಬಿಹಾಳ ವಿಧಾನ ಸಭಾ ವ್ಯಾಪ್ತಿಯಲ್ಲಿನ ಬಡ ಜನರಿಗೆ ಹಂಚಲು ಕಾರ್ಯಾರಂಭ ಸುರುವಾಗಿದೆ.
ಇದೆ ಸಂದರ್ಭದಲ್ಲಿ ಮುದ್ದೇಬಿಹಾಳ ಪೋಲಿಸ್ ಠಾಣೆಯ ಸಿಪಿಐ ಆನಂದ ವಾಗ್ಮೋಡೆ ಹಾಗೂ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರ ಕೈಗಳಿಂದಲು ಕಿಟ್ ವಿತರಿಸಲು ಮಾನ್ಯ ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತರವಲಯವು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಾಗಿ ಸಂಪರ್ಕಿಸಿ-8792900064