
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ ಕ್ಷೇತ್ರದ ಕೊಣ್ಣೂರ ಗ್ರಾಮದಲ್ಲಿ ಸುಮಾರು 500 ಮಾಸ್ಕಗಳನ್ನು ಗ್ರಾಮದ ಯುವಕರು ,ಹಿರಿಯರು ಹಾಗೂ ಮಹಿಳೆಯರಿಗೆ ಕೋವಿಡ್ -19 ವೈರಸ್ ಬಗ್ಗೆ ಜನಜಾಗೃತಿ ಮೂಡಿಸಿ ಸಾಮಾಜಿಕ ಅಂತರದ ಬಗ್ಗೆ ಹಾಗೂ ಮಾಸ್ಕ್ ಯಾಕೆ ಧರಿಸಬೇಕು ಅನ್ನುವ ಮಾಹಿತಿ ನೀಡಿ ವಿತರಿಸಿದರು. ಈ ಸಂದರ್ಭದಲ್ಲಿ ,ಸಿದ್ದನಗೌಡ ಗೌಡರ್, ಸಂಗಗೌಡ ಕೌಡಿಮಟ್ಟಿ,ಶಿವನಗೌಡ ತಾಳಿಕೋಟಿ, ಚಿದಾನಂದ ಯಾಳವಾರ, ಬಸಪ್ಪ ಗಣಿ, ರಾಮಣ್ಣ ಗಣಿ, ಶಿವಶರಣ ಹಡಪದ, ಹಾಗೂ ವಾಲ್ಮೀಕಿ ಸಂಘದ ಯುವಕರು ಬಾಗವಹಿಸಿದ್ದರು.

ಅಲ್ಲದೆ ಹೊಲಿಗೆ ಕೆಲಸ ಮಾಡುವ ಲಕ್ಷಾಂತರ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರಕಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಮತ್ತು ಸರಕಾರ ನೀಡುವ ಪ್ಯಾಕೇಜ್ ಸಹಾಯ ಪಡೆದುಕೊಳ್ಳಲು ಕಾರ್ಮಿಕರಿಗೆ ಕನಿಷ್ಠ ಒಬ್ಬರು 150ರಿಂದ 200 ಮಾಸ್ಕಗಳನ್ನು ತಯಾರು ಮಾಡಿ ತಾಲೂಕಾಡಳಿತಕ್ಕೆ ಒಪ್ಪಿಸುವ ಜವಾಬ್ದಾರಿ ನೀಡಬೇಕು. ಆಶಾ ಕಾರ್ಯಕರ್ತರಿಂದ ಪ್ರತಿ ಮನೆಗೆ ಮುಟ್ಟಿಸಬಹುದು ಸರಕಾರ ಈ ತರ ಮಾಡಿದರೆ ಕರ್ನಾಟಕದ ಪ್ರತಿ ಮನೆಮನೆಗೂ ಕೇವಲ ಒಂದು ವಾರದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ಸುಲಭವಾಗಿ ತಲುಪಿಸಬಹುದು.ಎಂಬ ಅಭಿಪ್ರಾಯ ಅವರದಾಗಿದೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳಿಗಾಗಿ ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts