ತುತ್ತು ಅನ್ನ ಕ್ಕೂ ಪರದಾಡಿದ ಜೀವಕ್ಕೆ ನ್ಯಾಯ ನೀಡಿದ ನ್ಯಾಯಾಧೀಶರು

ಕರೋನಾ ಸಂಕಷ್ಟ ಮತ್ತು ಲಾಕ್‌ಡೌನ್ ಜನರಿಗೆ ಅಸಹನೀಯ ನೋವನ್ನು ನೀಡಿರಬಹುದು, ಆದರೆ ಇದು ನಮ್ಮನ್ನು ಮನುಷ್ಯರನ್ನಾಗಿ ಮಾಡಿದೆ. ಪ್ರತಿಯೊಬ್ಬರೂ ತಮ್ಮ ಮನುಷ್ಯತ್ವವನ್ನ ಈ ಸಂದರ್ಭದಲ್ಲಿ ತೋರಿಸುತ್ತಿದ್ದು ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೆಲವರು ಹಸಿದವರಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದರೆ ಇನ್ನು ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಉಳಿದವರ ಪ್ರಾಣವನ್ನು ರಕ್ಷಿಸುತ್ತಿದ್ದಾರೆ. ಬಿಹಾರದ ನಳಂದದಲ್ಲಿ ನ್ಯಾಯಾಧೀಶರೊಬ್ಬರೂ ಕೂಡ ಇದೇ ರೀತಿಯ ಕಾರ್ಯವೊಂದನ್ನ ಮಾಡಿದ್ದಾರೆ.

ಬಿಹಾರದ ನಳಂದಾ ಜಿಲ್ಲೆಯ ಬಿಹಾರ್ ಶರೀಫ್ ನಲ್ಲಿ ಅಪ್ರಾಪ್ತ ವಯಸ್ಕನನ್ನು ಕಳ್ಳತನದ ಆರೋಪದ ಮೇಲೆ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹಸಿವಿನಿಂದ ಬಳಲುತ್ತಿರುವ ತಾಯಿಯ ಹಸಿವನ್ನು ನೀಗಿಸಲು ಆ ಯುವಕ ಕಳ್ಳತನ ಮಾಡಿದ್ದ. ಬಳಿಕ ಪೋಲಿಸರು ಆತನನ್ನ ಬಂಧಿಸಿ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು‌. ನ್ಯಾಯಾಧೀಶರಿಗೆ ಈ ವಿಷಯ ತಿಳಿದಾಗ ಅವರು ಆರೋಪಿಗೆ ಶಿಕ್ಷೆ ನೀಡುವ ಬದಲು ಅವನಿಗೆ ದವಸ ಧಾನ್ಯಗಳು ಹಾಗು ಆತನ ತಾಯಿಗೆ ಬಟ್ಟೆ ಕೊಡಿಸಿ ಮಾನವೀಯತೆಯ ನ್ಯಾಯ ಒದಗಿಸಿದ್ದಾರೆ.

ಪೊಲೀಸರು ಇಸ್ಲಾಂಪುರದಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕನನ್ನ ಬಂಧಿಸಿ ನ್ಯಾಯಾಧೀಶ ಮನ್ವೇಂದ್ರ ಮಿಶ್ರಾ ಅವರೆದುರು ಹಾಜರುಪಡಿಸಿದ್ದರು. ಅಪ್ರಾಪ್ತ ಬಾಲಕನ ಅಸಹಾಯಕತೆಯನ್ನು ಅರ್ಥಮಾಡಿಕೊಂಡ ನ್ಯಾಯಾಧೀಶರು ಆತನ ಅಪರಾಧಗಳನ್ನ ಮನ್ನಿಸಿದ್ದಾರೆ.

ಅಷ್ಟೇ ಅಲ್ಲದೆ ಅವರು ಆ ಬಾಲಕನ ಕುಟುಂಬಕ್ಕೆ ಬೇಕಾಗುವ ಎಲ್ಲ ರೀತಿಯ ಸಹಾಯ ಮತ್ತು ಸರ್ಕಾರಿ ಯೋಜನೆಗಳ ಸಂಪೂರ್ಣ ಲಾಭವನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಈ ಬಾಲಾಪರಾಧಿಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಪ್ರತಿ 4 ತಿಂಗಳಿಗೊಮ್ಮೆ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಇದಲ್ಲದೆ ಕುಟುಂಬಕ್ಕೆ ಪಡಿತರ ಚೀಟಿ, ಎಲ್ಲ ಸದಸ್ಯರ ಆಧಾರ್ ಕಾರ್ಡ್, ಬಾಲಕನ ತಾಯಿಗೆ ವಿಧವಾ ವೇತನ, ಮನೆ ನಿರ್ಮಾಣಕ್ಕೆ ಹಣ ನೀಡುವಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವಂತೆ ನ್ಯಾಯಾಧೀಶರು ಬಿಡಿಒಗೆ ಸೂಚಿಸಿದ್ದಾರೆ.

ಕಿಶೋರ್ ಅವರ ತಂದೆ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ತನ್ನ ಪತಿಯನ್ನ ಕಳೆದುಕೊಂಡ ತಾಯಿ ಮಾನಸಿಕ ಅಸ್ವಸ್ಥಳಾಗಿಬಿಟ್ಟಿದ್ದಳು. ಈಗ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಮಗನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಕಿಶೋರ್‌ಗೆ ಕಿರಿಯ ಸಹೋದರನೂ ಇದ್ದಾನೆ. ಕುಟುಂಬದ ನಿರ್ವಹಣೆಯ ಜವಾಬ್ದಾರಿ ಯುವಕನ ಮೇಲಿದೆ. ಕುಟುಂಬವು ಕೊಳೆಗೇರಿ ಮನೆಯಲ್ಲಿ ವಾಸಿಸುತ್ತಿದ್ದು ಲಾಕ್‌ಡೌನ್ ನಿಂದಾಗಿ ಊಟಕ್ಕಾಗಿ ಪರದಾಡುತ್ತಿತ್ತು. ನ್ಯಾಯಾಧೀಶರ ಈ ನಡೆ ನಿಜಕ್ಕೂ ಶ್ಲಾಘನೀಯವೇ ಸರಿ.

ರಾಯಲ್ ಟಿವಿ ನ್ಯೂಸ್ ನವದೆಹಲಿ, ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started