ಹೈದರಾಬಾದ(ತೆಲಂಗಾಣ): ಭಾರತ ದೇಶವೇ ಬೆಚ್ಚಿ ಬಿದ್ದಿದ್ದ ನಿರ್ಭಯಾ ಅತ್ಯಾಚಾರ ದುರಂತ ಪ್ರಕರಣ ಮರೆಯುವ ಮುನ್ನವೇ ಆಂದ್ರಪ್ರದೇಶದಲ್ಲಿ ಇನ್ನೊಂದು ಪ್ರಕರಣ ಡಾ.ಪ್ರಿಯಾಂಕ ರೆಡ್ಡಿ ಮೇಲಿನ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ನಾಲ್ಕು ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ದೇಶದ ಜನ ಕುದಿಯುತ್ತಿರುವಾಗ ಇಂದು ಮುಂಜಾನೆ 3.30 ಕ್ಕೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದಕ್ಕೆ ತ್ತ ಪ್ರಿಯಾಂಕಾಳ ಕುಟುಂಬಕ್ಕೂ ಹಾಗೂ ದೇಶದ ಎಲ್ಲಾ ಹೆಣ್ಣು ಕುಲಕ್ಕೆ ಸಿಕ್ಕ ನ್ಯಾಯವಾಗಿದೆ. ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿಜೆಪಿ ಮುಖಂಡರಾದ ಶ್ರೀಮತಿ ಕಾಶೀಬಾಯಿ ರಾಂಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
