ಡಾ.ಚನ್ನಣ್ಣ ವಾಲಿಕಾರ ಅವರಿಗೆ ನುಡಿ ನಮನ ಸಲ್ಲಿಕೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ವಿ,ಬಿ.ಸಿ ಪ್ರೌಢಶಾಲೆ, ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ
ಉತ್ತರ ಕರ್ನಾಟಕದ ಬಂಡಾಯ ಜನಕ ಚನ್ನಣ್ಣ:-
ಮುದ್ದೇಬಿಹಾಳ ತಾಲೂಕಾ. ದಲಿತ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೂಂಡ ಬಂಡಾಯ ಸಾಹಿತಿ
ಚನ್ನಣ್ಣ ವಾಲಿಕಾರರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅದ್ಯಕ್ಷ
ಶಿವಪುತ್ರ ಅಜಮನಿ, ಮಾತನಾಡಿ ಚನ್ನಣ್ಣ ವಾಲಿಕಾರ ಒಬ್ಬ ಸೂಕ್ಷ್ಮಗ್ರಾಹಿ ಬರಹಗಾರರಾಗಿದ್ದು ಸಮಾಜದ
ಅವನತಿ ಆಶೆಯಗಳನ್ನು ಮೊದಲೆ ಗ್ರಹಿಸಿಕೂಂಡು ಬರೆಯುವ ಸಾರ್ಮಥ್ಯ ಹೊಂದಿದ್ದರು ಅವರ ಬರವಣಿಗೆ
ಬೆಂಕಿ ಉಗುಳುವ ಕೆನ್ನಾಲಿಗೆಯಂತೆ ಅವರ ಬರವಣಿಗೆ ಜಳಪಿಸುವ ಖಡ್ಡದಂತೆ ಸಮಾಜದ
ಒರೆಕೂರೆಗಳನ್ನು ತಿವಿದು ಸರಿದಾರಿಗೆ ತರುವ ಗಟ್ಟಿ ಸಾಹಿತ್ಯ ಅವರದಾಗಿತ್ತು. ಅವರೊಬ ಪ್ರಬುದ್ದ
ಬಂಡಾಯ ಸಾಹಿತಿಯಾಗಿದ್ದು ಉತ್ತರ ಕರ್ನಾಟಕದ ಹೆಗ್ಗೆಳಿಕೆಯ ಲೇಖಕರಾಗಿದ್ದು ಬಂಡಾಯದ ಜನಕ
ಎಂದೂ ಕರೆದರೊ ತಪ್ಪಾಗಲಾರದು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ
ಅಧ್ಯಕ್ಷರಾದ ಎಂ.ಬಿ.ನಾವದಗಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡರವರು
ಮಕ್ಕಳಸಾಹಿತ್ಯ ಸಿದ್ದನಗೌಡ ಬಿಜ್ಜೂರ ಸಾಹಿತಿ ಎಂ,ಎಚ್. ಹಾಲಿಹಾಳ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ
ಎಸ್.ಎಸ್. ಕರಡ್ಡಿ ಶ್ರೀಮತಿ ಸರಸ್ವತಿ ಚಿಮ್ಮಲಗಿ ಅವರು ಅಥಿತಿಗಾಗಿ ಉಪಸ್ಥಿತರಿದ್ದರೊ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ತಾಲೂಕಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಭರತ ಉಪ್ಪಲದಿನ್ನಿರವರು
ವಹಿಸಿಕೂಂಡರು.
ಕಾರ್ಯಕ್ರಮದ ನಿರೂಪಣೆಯನ್ನು ಹುಸೆನ್ ಮುಲ್ಲಾರವರು ಮಾಡಿದರು.
ವಂದನಾರ್ಪಣೆ ಅನಿಲ್ ಹಡಪದರವರು ನೇರೆವಸಿದರು.
ವರದಿ:ಸಾಗರ ಉಕ್ಕಲಿ-ವಿಜಯಪುರ
