ಆರೋಗ್ಯ ಇಲಾಖೆಯಿಂದ ವಿಶೇಷ ಶಾಲಾ ಲಸಿಕೆ ಅಭಿಯಾನ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ

ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿ ಬರುವ ಜ್ಞಾನ ಗಂಗೋತ್ರಿ ಪ್ರಾಥಮಿಕ ಶಾಲೆ ಹಾಗೂ ಶಾಂತಲಾ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡ ವಿಶೇಷ ಶಾಲಾ ಲಸಿಕಾ ಅಭಿಯಾನಕ್ಕೆ ಪುರಸಭಾ ಸದಸ್ಯ ಸದಾನಂದ ಮಾಗಿ ಹಾಗೂ ಪುರಸಭಾ ಸದಸ್ಯನಿ ಶ್ರೀಮತಿ ಭಾರತಿ ಆರ್ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಅನುಸೂಯ ತೇರದಾಳ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮಾತನಾಡಿ:

ಮಕ್ಕಳನ್ನು ಕಾಡುವ ಗಂಟಲುಮಾರಿ, ಧನುರ್ವಾಯು ರೋಗಗಳನ್ನು ತಡೆಗಟ್ಟುವ ಡಿಪಿಟಿ ಬೂಸ್ಟರ್ ಹಾಗೂ ಟಿ.ಡಿ. ಲಸಿಕೆ ಹಾಕುವ ಶಾಲಾ ಲಸಿಕಾ ಅಭಿಯಾನವನ್ನು ಇದೆ ಡಿ. 11 ರಿಂದ 31 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು 5 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್‌ ಲಸಿಕೆ ಹಾಕಲಾಗುವುದು 7 ರಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಟಿ.ಡಿ ಲಸಿಕೆಯನ್ನು ಹಾಕಲಾಗುವುದು ಇದಕ್ಕಾಗಿ ಮುದ್ದೇಬಿಹಾಳ ತಾಲ್ಲೂಕಿನಲ್ಲಿ 71351 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಹಾಗೂ ಮುದ್ದೇಬಿಹಾಳ ನಗರದಲ್ಲಿ 10747 ಮಕ್ಕಳ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಎಮ್ ಎಸ್ ಗೌಡರ ಮುದ್ದೇಬಿಹಾಳ ನಗರದ ಅಭಿಯಾನ ಮೇಲ್ವಿಚಾರಕರು ಮಾತನಾಡಿ:

ಡಿಪಿಟಿ ಬೂಸ್ಟರ್ ಹಾಗೂ ಟಿ.ಡಿ. ಲಸಿಕೆಯನ್ನು ತಾಲ್ಲೂಕಿನ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳು, ಅಂಗನವಾಡಿಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಅಂಗನವಾಡಿ ವ್ಯಾಪ್ತಿಯಿಂದ ಹೊರಗುಳಿದಿರುವ ಮಕ್ಕಳನ್ನು ಸಹ ಈಗಾಗಲೆ ಗುರುತಿಸಲಾಗಿದೆ. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ತರಬೇತಿ ಹೊಂದಿದ ವ್ಯಾಕ್ಸಿನೇಟರ್ಸ್‍ಗಳು ಲಸಿಕೆ ನೀಡುತ್ತಾರೆ. ಎಲ್ಲ ಪೋಷಕರು ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಒಟ್ಟಾರೆ ತಾಲ್ಲೂಕಿನಲ್ಲಿ ಯಾವುದೇ ಒಂದು ಮಗು ಲಸಿಕೆಯಿಂದ ವಂಚಿತವಾಗಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎ ಆರ್ ಪಾಟೀಲ್ ಐ ವ್ಹಿ ಬಿಜ್ಜುರ ಆರೋಗ್ಯ ಇಲಾಖೆಯ ಶುಶ್ರೋಷಕರಾದ ಮಾಲಾ ಗುರಿಕಾರ ಲಲಿತಾ ಅಬ್ಬಿಹಾಳ ಎಸ್ ಆರ್ ಸಜ್ಜನ ಸಿದ್ದು ಬಿದಗೊಂಡ ಹಾಗು ಆಶಾ ಮೇಲ್ವಿಚಾರಕಕಿ ಪ್ರಶಿಭಾರಾಣಿ ಹಾಗು ಆಶಾ ಕಾರ್ಯಕರ್ತೆಯರಾದ ಪದ್ಮಾವತಿ ಸಾಲೋಡಗಿ ಶಿವಕಾಂತ್ ಮೇಟಿ ಮೋದಿನ್ಮ್ ಮುಲ್ಲಾ ಬಿಸ್ಮಿಲ್ಲಾ ಪಿಂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:ಸಾಗರ ಎಂ ಉಕ್ಕಲಿ ವಿಜಯಪುರ

Published by Royal TV

Royal tv Kannada news online website channel

Leave a comment

Design a site like this with WordPress.com
Get started