ಪೋಲಿಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ

ಅಪರಾಧ ತಡೆಗಟ್ಟುವಲ್ಲಿ ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಅಪರಾಧ ಘಟಿಸಿದ ಮೇಲೆ ಎಚ್ಚರಗೊಳ್ಳುವುದಕ್ಕಿಂತ ಅಪರಾಧ ನಡೆಯದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಜಾಣತನದ ನಡೆಯಾಗಿದೆ ಎಂದು ಸಿಪಿಐ ಆನಂದ ವಾಘ್ಮೋಡೆ ಹೇಳಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಹುಡ್ಕೋದಲ್ಲಿರುವ ಹಸಿರು ತೋರಣ ಬಳಗದ ಗಾರ್ಡನ್ ಮತ್ತು ಮಾರುತಿನಗರ ಬಡಾವಣೆಯಲ್ಲಿರುವ ಗಾರ್ಡನ್‍ನಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ ಪೋಲಿಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಅಪರಾಧ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು ಅವರು ಹೆಚ್ಚು ಮುನ್ನೆಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮೈಮೇಲೆ ಚಿನ್ನಾಭರಣಗಳನ್ನು ಹಾಕಿಕೊಂಡು ಸಂಚರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ಓಣಿಯಲ್ಲಿ ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಸಂಚಾರ ಕಂಡುಬಂದರೆ ತಕ್ಷಣ ಪೋಲಿಸ್ ರಿಗೆ ಮಾಹಿತಿ ನೀಡಬೇಕು. ಚಿನ್ನಾಭರಣ ಸ್ವಚ್ಛಗೊಳಿಸುವ ನೆಪದಲ್ಲಿ ಬರುವ ಬೇರೆ ರಾಜ್ಯಗಳ ವಂಚಕರನ್ನು ನಂಬಬಾರದು. ವಾಹನಗಳನ್ನು ಮನೆಯ ಹೊರಗೆ ನಿಲ್ಲಿಸಿದಾಗ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಎಲ್ಲೆಲ್ಲೆ ಅಪರಾಧ ಚಟುವಟಿಕೆಗಳು ನಡೆಯುವ ಸಂಭವ ಇರುತ್ತದೆಯೋ ಅಲ್ಲೆಲ್ಲ ಪೆÇಲೀಸರ ಗಸ್ತು ಹೆಚ್ಚಿಸಿ ಭದ್ರತೆ ಒದಗಿಸಲು ಇಲಾಖೆ ವತಿಯಿಂದ ಕ್ರಮ ಕೈಕೊಳ್ಳಲಾಗುತ್ತದೆ ಎಂದರು.

ಅಪರಾಧ ತಡೆಗಟ್ಟುವ ಕುರಿತು ಪೋಲಿಸ್ ಇಲಾಖೆ ಹೊರಡಿಸಿರುವ ಕರಪತ್ರಗಳನ್ನು ಎಲ್ಲರೂ ಓದಿ ಅದರಲ್ಲಿರುವ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಈ ಕರಪತ್ರಗಳನ್ನು ಮನೆಯಲ್ಲಿ ಸಂರಕ್ಷಿಸಿ ಇಟ್ಟುಕೊಂಡು ಆವಾಗಾವಾಗ ಅದರಲ್ಲಿನ ಮಾಹಿತಿಗಳ ಮೇಲೆ ಕಣ್ಣಾಡಿಸುತ್ತಿರಬೇಕು. ಅಕ್ಕಪಕ್ಕದವರಿಗೆ ಈ ಬಗ್ಗೆ ಜಾಗ್ರತೆ ಮೂಡಿಸಲು ಮುಂದಾಗಬೇಕು. ಮನೆಗಳ್ಳತನದ ಬಗ್ಗೆ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಬಾಗಿಲಿಗೆ ಬೀಗ ಹಾಕಿ ಪರ ಊರಿಗೆ ಹೋಗುವುದಕ್ಕೂ ಮುನ್ನ ಪೆÇಲೀಸರಿಗೆ ಮಾಹಿತಿ ಕೊಡಬೇಕು. ಪೆÇಲೀಸರು ಆಯಕಟ್ಟಿನ ಸ್ಥಗಳಲ್ಲಿ ಗಸ್ತು ತಿರುಗುತ್ತಿರುತ್ತಾರೆ. ನಮ್ಮ ಪೋಲಿಸ್ ಇಲಾಖೆ ಕೆಲವು ಕಳ್ಳತನ ಪತ್ತೆಹಚ್ಚಿ ಕಳ್ಳರನ್ನು ಜೈಲಿಗೆ ಕಳಿಸಿದ್ದಾರೆ. ಆದರೂ ಸಾರ್ವಜನಿಕರ ಸಹಕಾರ ಇಲ್ಲದೆ ಏನೂ ಮಾಡಲು ಆಗೊಲ್ಲ. ಹೀಗಾಗಿ ಅಪರಾಧ ತಡಗಟ್ಟುವಲ್ಲಿ ಸಾರ್ವಜನಿಕರ ಪಾತ್ರವೂ ಬಹುಮುಖ್ಯವಾಗಿದೆ ಎಂದರು.

ಹುಡ್ಕೋ ಗಾರ್ಡನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರಾಧ ವಿಭಾಗದ ಪೇದೆ ಮಹೇಶ ಮಠಪತಿ ಅಪರಾಧ ತಡೆಗಟ್ಟುವ ಕುರಿತು ಮಾತನಾಡಿದರು. ಮಹಾಬಲೇಶ ಗಡೇದ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ ಪೋಲಿಸ್ ರು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆ ನೀಡಿದರು.

ಪಿಎಸೈ ಟಿ.ಜಿ.ನೆಲವಾಸಿ, ಹಸಿರು ತೋರಣ ಗೆಳೆಯರ ಬಳಗದ ಕಾರ್ಯದರ್ಶಿ ಸುರೇಶ ಕಲಾಲ, ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ಅಶೋಕ ರೇವಡಿ, ಡಾ.ವೀರೇಶ ಇಟಗಿ, ಡಾ.ವಿಜಯಕುಮಾರ ಗೂಳಿ, ಡಾ.ವೀರೇಶ ಪಾಟೀಲ, ವೆಂಕನಗೌಡ ಪಾಟೀಲ, ಎಂ.ಎಸ್.ಬಾಗೇವಾಡಿ, ಸುಧಿರ ಕತ್ತಿ, ರವಿ ಗೂಳಿ, ಪುನೀತ್ ಹಿಪ್ಪರಗಿ, ಮಂಜುನಾಥ ರತ್ನಾಕರ, ಬಿ.ಎಸ್.ಮೇಟಿ ಸೇರಿದಂತೆ 25-30 ಜನ ಪಾಲ್ಗೊಂಡಿದ್ದರು.

ಮಾರುತಿನಗರ ಗಾರ್ಡನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಮನೋಹರ ತುಪ್ಪದ, ನಿವೃತ್ತ ಪ್ರಾಧ್ಯಾಪಕ ಜಿ.ಎನ್.ತಟ್ಟಿ, ಪ್ರೋಪೆಸರ.ಎಸ್.ಎಸ್.ಹೂಗಾರ ಮಾತನಾಡಿ ಸಲಹೆ ಸೂಚನೆ ನೀಡಿದರು.

ಈ ವೇಳೆ ಇದ್ದ ಸಾರ್ವಜನಿಕರು ಪೋಲೀಸರು, ಪುರಸಭೆ ಅಧಿಕಾರಿಗಳು ಜಂಟಿಯಾಗಿ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮುಖ್ಯವಾಗಿ ಎಲ್ಲಾ ಕಡೆ ಬೀದಿ ದೀಪಕ್ಕೆ ಬಲ್ಬ್ ಅಳವಡಿಸಿ ಅವು ರಾತ್ರಿ ಬೆಳಕು ಬೀರುವಂತೆ ನೋಡಿಕೊಂಡಲ್ಲಿ ಅಪರಾಧ ತಡೆತಟ್ಟಲು ಹೆಚ್ಚು ಅನುಕೂಲ ಆಗುತ್ತದೆ ಎನ್ನುವ ಬಗ್ಗೆ ಗಮನಸೆಳೆಯಲಾಯಿತು. ಪಿಎಸೈ ಟಿ.ಜಿ.ನೆಲವಾಸಿ, ಪುರಸಭೆ ಸದಸ್ಯರಾದ ಭಾರತಿ ಪಾಟೀಲ, ಸದಾಶಿವ ಮಾಗಿ, ಪುರಸಭೆ ಮುಖ್ಯಾಧಿಕಾರಿಣಿ ಭಾರತಿ ಮಾಡಗಿ, ಗಣ್ಯರಾದ ಆರ್.ಬಿ.ಪಾಟೀಲ ವಕೀಲರು, ಸೋಮನಗೌಡ ಪಾಟೀಲ ನಡಹಳ್ಳಿ, ಬಿ.ಜಿ.ಜಗ್ಗಲ್, ಬಡಾವಣೆ ಪ್ರಮುಖರು ಪಾಲ್ಗೊಂಡಿದ್ದರು. ಬಸವರಾಜ ನಂದಿಕೇಶ್ವರಮಠ ಸ್ವಾಗತಿಸಿ ನಿರೂಪಿಸಿದರು.

ವರದಿ:ಸಾಗರ ಉಕ್ಕಲಿ ವಿಜಯಪುರ

Published by Royal TV

Royal tv Kannada news online website channel

Leave a comment

Design a site like this with WordPress.com
Get started