ವಿಜಯಪುರ: ಇಂದು ವಿಜಾಪುರ ನಗರದ ಹಳಕಟ್ಟಿ ಸಭಾಭವನದಲ್ಲಿ ಡಿಸೆಂಬರ್ 29 ರಂದು ನಡೆಯಲಿರುವ ಚೆನ್ನಮ್ಮಾಜಿಯ ವಿಜಯೋತ್ಸವದ ತಯಾರಿ ಕುರಿತು ಕಾರ್ಯಕ್ರಮ ಯಶಸ್ವಿಗೊಳಿಸಲು ಚರ್ಚಿಸಿದರು.
ಸಭೆಯಲ್ಲಿ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ:
1005 ತಾಯಂದಿರು ಬುತ್ತಿ ರೊಟ್ಟಿ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿದ್ದು ಮೆರವಣಿಗೆ ಸಿದ್ದೇಶ್ವರ ಗುಡಿಯಿಂದ ಪ್ರಾರಂಭವಾಗಿ ಐಶ್ವರ್ಯ ನಗರದ ಕಿತ್ತೂರರಾಣಿ ಚೆನ್ನಮ್ಮ ಸಭಾಭವನ ತಲುಪುವುದು ಕಾರ್ಯಕ್ರಮ ಕೇ ನಮ್ಮ ಸಮಾಜದ ಸಚಿವರು ಶಾಸಕರು ಸಂಸದರು ಮಾಜಿ ಶಾಸಕರು/ ಸಂಸದರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಬಿ ಎಂ ಪಾಟೀಲ್ ಮಾತನಾಡಿ:
ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರು ಯುವ ಘಟಕ ಮಹಿಳಾ ಘಟಕ ನೌಕರರ ಘಟಕಗಳನ್ನು ಮಾಡಲಾಗಿದ್ದು ಸಮಾಜ ಬಂಧುಗಳು ತನು-ಮನ ಧನದಿಂದ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಬೇಕೆಂದು ಹೇಳಿದರು.
ಮುದ್ದೇಬಿಹಾಳ್ ತಾಲೂಕ ಅಧ್ಯಕ್ಷ ಸಿದ್ದರಾಜ್ ಹೊಳಿ ಮಾತನಾಡಿ:
ಪ್ರತಿ ತಾಲೂಕಿನಿಂದ 2000 ಜನ ಬರಲು ವಿನಂತಿಸಿ ಜಿಲ್ಲೆಯಿಂದ ಸುಮಾರು 10000 ಮೇಲ್ಪಟ್ಟು ಜನರನ್ನು ಸೇರಿಸಲು ಪ್ರಯತ್ನಿಸೋಣ ಎಂದರು ಹಾಗೂ ರಾಜ್ಯದ ನಮ್ಮ ಸಮಾಜದ ಎಲ್ಲ ಶಾಸಕರು ಸಂಸದರನ್ನು ಈ ಕಾರ್ಯಕ್ರಮಕ್ಕೆ ಅವಾನಿಸಬೇಕೆಂದು ಹಾಗೂ ಯುವಕರು ಕೇಂದ್ರ ಬಸ್ ನಿಲ್ದಾಣ ಮುಂದುಗಡೆ ಇರುವ ಕಿತ್ತೂರ ಚನ್ನಮ್ಮ ಸರ್ಕಲ್ ನಿಂದ ಬೈಕ್ ರಾಲಿಯನ್ನು ಬೆಳಗ್ಗೆ 9 ಗಂಟೆಗೆ ಶ್ರೀಗಳು ಚಾಲನೆ ನೀಡಿದ ನಂತರ ಗಾಂಧಿ ಸರ್ಕಲ್ ಮಾರ್ಗವಾಗಿ ಸಿದ್ದೇಶ್ವರ ಗುಡಿ ತಲುಪುವುದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ ನಗರದ ಯುವಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಆದರ್ಶ ರಾಜಕಾರಣಿಗಳಾದ ದಿವಂಗತ ಶ್ರೀಮಂತ ಜಗದೇವರಾವ್ ದೇಶಮುಖ್ ಮಾಜಿ ಸಚಿವರು ಹಾಗೂ ದಿವಂಗತ ಶ್ರೀ ಬಿ ಎಸ್ ಪಾಟೀಲ್ ಮನಗೂಳಿ ಮಾಜಿ ಸಚಿವರು ಇವರ ಹೆಸರಲ್ಲಿ ನಮ್ಮ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮಾಡಲು ನಿರ್ಧಾರ ಕೈಗೊಂಡರು.
ಈ ಸಭೆಯಲ್ಲಿ ವಿಜಯಪುರ ನಗರ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಹಗರಟಗಿ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರಾದ ಲತಾ ಬಿರಾದಾರ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಮು ದೇವರ ಇಂಡಿ ವಿಜಯಪುರ ನಗರ ಯುವ ಘಟಕದ ಅಧ್ಯಕ್ಷ ಸದಾಶಿವ ಅರಳಿಗಿಡದ ವಿಜಯಪುರ ನಗರ ಘಟಕದ ಅಧ್ಯಕ್ಷರಾದ ಎಸ್ ಆರ್ ಬುಕಾಣಿ ಮಾಜಿ ಅಧ್ಯಕ್ಷರಾದ ರಮೇಶ್ ಕಮತ್ ಹಾಗೂ ತಾಲೂಕಿನ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ತಾಯಂದಿರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.