ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ತುಮಕೂರ : ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಲಿಂಗೈಕ್ಯ ಕಲಿಯುಗ ದೇವ ಡಾ.ಶಿವಕುಮಾರ ಗದ್ದುಗೆಯ ದರ್ಶನವನ್ನು ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಠದಲ್ಲಿ ಇರುವಂತಹ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪಾಕಿಸ್ತಾನದಿಂದ ಸಿಖ್ಖರು, ಜೈನರು, ಪಾರ್ಸಿಗಳು ತೊಂದರೆಗೆ ಒಳಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಅಂತವರ ರಕ್ಷಣೆಗೆ ಮುಂದಾದರೆ ಕೆಲವರು ಅದರ ವಿರುದ್ಧ ಹೋರಾಡುತ್ತಿದ್ದಾರೆ. ಸಂಕಷ್ಟದಲ್ಲಿದ್ದವರನ್ನು ರಕ್ಷಿಸುವುದು ಸರಿ ಅಲ್ಲವೇ ಎಂದು ಪ್ರಶ್ನಿಸಿದರು.

ಇತ್ತಿಚಿನ ದಿನಗಳಲ್ಲಿ ಧರ್ಮದ ಆಧಾರಾದ ಮೇಲೆ ದಬ್ಬಾಳಿಕೆಗೆ ಗುರಿಯಾದವರನ್ನು ರಕ್ಷಿಸಲು ನಾವು ಕಾನೂನು ತಂದಿದ್ದೇವೆ. ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಂತವರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಆದರೆ ಕೆಲವರು ಸಂಸತ್ ನಿರ್ಣಯದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಪಕ್ಷದವರು ಸಂಸತ್ ನಿರ್ಣಗಳ ವಿರುದ್ಧ ದೇಶದಲ್ಲಿ ಹೋರಾಟ, ಪ್ರತಿಭಟನೆಗಳನ್ನು ಮಾಡುವ ಬದಲು ಪಾಕಿಸ್ತಾನದಲ್ಲಿ ದಬ್ಬಾಳಿಕೆ ಮಾಡುತ್ತಿರುವವರ ವಿರುದ್ಧ ಹೋರಾಡಿ. ಪಾಕ್ ನ 70 ವರ್ಷಾಗಳ ಕರಾಳ ಕಾರ್ಯದ ವಿರುದ್ಧ ಹೋರಾಡಿ. ವಿಪಕ್ಷಗಳು ದೇಶದ ಜನರ ದಾರಿಯನ್ನು ತಪ್ಪಿಸುವ ಕಾರ್ಯ ಮಾಡುತ್ತ ಪ್ರತಿಭಟನೆಗಳಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತ ಬರುತ್ತಿವೆ ಅದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಭಾರತದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನಮಟ್ಟವನ್ನು ಅಭಿವೃದ್ಧಿ ಪಡಿಸುವತ್ತ ನಮ್ಮ ಸರ್ಕಾರ ಕೆಲಸಮಾಡುತ್ತಿದೆ.ಅಲ್ಲದೆ ದೇಶದಲ್ಲಿ ಆರೋಗ್ಯ ವಿಮೆ, ಗ್ಯಾಸ್ ಸಂಪರ್ಕ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಬಡವರಿಗೆ ನೀಡುವುದು ನಮ್ಮ ಸರ್ಕಾರದ ಕೆಲಸವಾಗಿದೆ. ಇದರಲ್ಲಿ ಜನರು ಬದಲಾವಣೆಗಾಗಿ ನನಗೆ ಆಶೀರ್ವಾದಿಸಿದ್ದಾರೆ. ದೇಶದಲ್ಲಿನ ಬಡತನವನ್ನು ನಿರ್ಮೂಲನೆ ಮಾಡೋನ. ಭಯೋತ್ಪಾದನೆ ವಿರುದ್ಧ ಭಾರತದ ನೀತಿಯಲ್ಲಿ ಬದಲಾವಣೆಯಾಗಿದೆ ಎಂಬುದಕ್ಕೆ ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಸಾಕ್ಷಿಯಾಗಿದೆ. ರಾಮ ಮಂದಿರ ನಿರ್ಮಿಸುವುದಕ್ಕೆ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದವರು ಹಾಗೂ ಅವರ ಸಹಚರರು ಸಂವಿಧಾನಾದ ವಿರುದ್ಧವಾಗಿದ್ದಾರೆ.

ಈ ಹಿಂದೆ 2014 ರಲ್ಲಿ ಸ್ವಚ್ಛ ಭಾರತ ಮಾಡುವುದರಲ್ಲಿ ನೀವು ಭಾಗಿಗಳಾಗಿ ಎಂದು ವಿನಂತಿಸಿದ್ದೇವು.ಆದರೆ ಈಗ ಬಯಲು ಮುಕ್ತ ಶೌಚಾಲಯದತ್ತ ಪಣ ತೊಟ್ಟಿದ್ದು 21ನೇ ಶತಮಾನದ 3 ನೇ ದಶಕದಲ್ಲಿ ನವಭಾರತ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕುತ್ತಿದ್ದೇವೆ ಹಾಗೂ ಪ್ರಕೃತಿ, ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಮುಕ್ತ ಮಾಡೋಣ ಈಗಾಗಲೇ ಅದು ಜಾರಿಯಲ್ಲಿದೆ ಅದಕ್ಕೆ ಸಹಕರಿಸಿ. ನೀರು ಅತ್ಯಂತ ಅವಶ್ಯವಾದದ್ದು ಅದನ್ನು ಸಂರಕ್ಷಣೆಗೆ ಜನಾ ಜಾಗೃತಿ ಆಂದೋಲನ ಮಾಡೋಣ ವೆಂದು ಹೇಳಿದರು.

ಆದರೆ ನಾನು ಸಿದ್ದಗಂಗಾ ಮಠಕ್ಕೆ ಅಗಮಿಸಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಆದರೆ ಇಲ್ಲಿ ಪರಮಪೂಜ್ಯ ಶಿವಕುಮಾರ ಸ್ವಾಮಿಗಳು ಇಲ್ಲ ಎಂಬ ಮೌನ ಆವರಿಸುತ್ತಿದೆ. ಶ್ರೀಗಳ ಬೌತಿಕ ಅನುಪಸ್ಥಿತಿ ನಮ್ಮನ್ನು ಕಾಡುತ್ತಿದೆ ಎಂದರು. ನಂತರ ಇಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಶಿಲನ್ಯಾಸ ಮಾಡುವುದು ಅದು ನನ್ನ ಸೌಭಾಗ್ಯ ಎಂದ ಪ್ರಧಾನ ಮಂತ್ರಿ ಮೋದಿಜೀ ಹೇಳಿದರು. ಕರ್ನಾಟಕದ ಇನ್ನೊಬ್ಬ ಸಂತ ಪೇಜಾವರ ಶ್ರೀಗಳು ನಮ್ಮನ್ನು ಅಗಲಿರುವುದು ಅತೀವ್ರವಾದ ದು:ಖ ವೆನಿಸುತ್ತಿದೆ ಎಂದು ಮಾತನಾಡಿದರು.

-ರಾಯಲ್ ಟಿವಿ ನ್ಯೂಸ್

Published by Royal TV

Royal tv Kannada news online website channel

Leave a comment

Design a site like this with WordPress.com
Get started