ವಾಲ್ಮೀಕಿ ಸಮಾಜಕ್ಕೆ 7.5ಮೀಸಲಾತಿ ಘೋಷಿಸದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಮುಂದೆ ಧರಣಿ-ಸ್ವಾಮೀಜಿ ಎಚ್ಚರಿಕೆ

ವಾಲ್ಮೀಕಿ ನಾಯಕ ಸಮಾಜಕ್ಕೆ ಶೀಘ್ರವೇ 7.5ಮೀಸಲಾತಿ ಘೋಷಿಸಬೇಕು.ನಿರ್ಲಕ್ಷಿಸಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಪ್ರತಿಭಟನೆ ಮಾಡಲಾಗುವುದೆಂದು ಶ್ರೀ ವಾಲ್ಮೀಕಿ ಮಹರ್ಷಿ ಪುಣ್ಯಾನಂದ ಪುರಿಸ್ವಾಮಿರವರು ಈ ಮೂಲಕ ಎಚ್ಚರಿಸಿದ್ದಾರೆ.ಅವರು ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿ ಜಾತ್ರೆ ಪ್ರಯುಕ್ತ ಪೂರ್ವ ಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ರಾಜ್ಯದ ಪ್ರಭಾವಿ ಸಮಾಜವನ್ನು ನಿರ್ಲಕ್ಷಿಸುವ ಯಾವುದೇ ಪಕ್ಷದ ಯಾವುದೇ ಸರ್ಕಾರ ಗಳಿಗೆ ಆಯುಷ್ಯವಿರುವುದಿಲ್ಲ.ಇದನ್ನು ರಾಜ್ಯ ಸರ್ಕಾರ ಅರಿತು ಸಮಾಜದ ಬಹುದಿನಗಳ ಬೇಡಿಕೆಯಾದ 7.5ಮೀಸಲಾತಿಯನ್ನು ರಾಜ್ಯ ಸರ್ಕಾರ ಘೋಷಿಸಬೇಕಿದೆ.ಎಂದು ಸ್ವಾಮೀಜಿ ಸರ್ಕಾರ ಕ್ಕೆ ಈ ಮೂಲಕ ಎಚ್ಚರಿಸಿದ್ದಾರೆ.

ಜಾತ್ರೆಯಲ್ಲಿ ಸಮಾಜದವರೆಲ್ಲರೂ ಭಾಗವಹಿಸಿ ಯಶಸ್ವೀಗೊಳಿಸಬೇಕಿದೆ.ಮೂಲಕ ಸರ್ಕಾರ ಕ್ಕೆ ಎಚ್ಚರಿಕೆ ಸಂದೇಶ ರವಾನಿಸಬೇಕಿದೆ.ಕಾರಣ ಸಮಾಜದ ಭಾಂದವರು ಸರ್ವ ಪಕ್ಷಗಳ ಜನಪ್ರತಿನಿಧಿಗಳು.ಎಲ್ಲಾಪಕ್ಷಗಳ ಮುಖಂಡರು ಪಕ್ಷಭೇದಮರೆತು ಸಮಾಜದ ಹಿತಕ್ಕಾಗಿ ಜಾತ್ರೆಯಲ್ಲಿ ಸಮಾಜದ ಯುವಕರು ಹಿರಿಯರು ಮುಖಂಡರು ಸರ್ವರು ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಶ್ರೀ ವಾಲ್ಮೀಕಿ ಪುಣ್ಯಾನಂದಪುರಿ ಸ್ವಾಮೀಜಿ ಕರೆ ನೀಡಿದರು. ಶ್ರೀವಾಲ್ಮೀಕಿ ಮಹರ್ಷಿ ಜಾತ್ರಾ ಮಹೋತ್ಸವದ ಕೂಡ್ಲಿಗಿ ತಾಲೂಕು ಉಸ್ಥುವಾರಿ ಸಮಿತಿ ಅಧ್ಯಕ್ಷರನ್ನಾಗಿ ರಾಮದುರ್ಗ ಪಾಪಣ್ಣನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.ಶ್ರೀ ಕೃಷ್ಣ ಐಕ್ಯರಾದ ಉಡುಪಿ ಶ್ರೀ ಪೇಜಾವರ ಸ್ವಾಮಿಗಳಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅರ್ಪಿಸಿದರು. ಮತ್ತು ವಾಲ್ಮೀಕಿ ಸಮಾಜದವರಾದ ಕೂಡ್ಲಿಗಿ ಪಟ್ಟಣ ಪಂಚಾಯ್ತಿಗೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವವರನ್ನು ಸಭೆಯಲ್ಲಿ ಅಭಿನಂದಿಸಿ ಸನ್ಮಾನಿಸಿದರು.
ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ಹ ಸಮಾಜದ ಮುಖಂಡರು.ಜನಪ್ರತಿನಿಧಿಗಳು.ಸಂಘ ಸಂಸ್ಥೆಗಳ ಪದಾಧಿಕಾರಿಗಳು.ಸದಸ್ಯರು.ಸಮಾಜದ ಯುವಮುಖಂಡರು. ಸಮಾಜದ ಹಿರಿಯರು. ನೌಕರಸಂಘದವರು ಶ್ರೀವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳು ಸದಸ್ಯರು ಇನ್ನೂ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ:ವೃಷಬೇಂದ್ರ ಕೂಡ್ಲಿಗಿ
Published by Royal TV
Royal tv Kannada news online website channel
View more posts