ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಜಿ ಸಚಿವ ಸಿ.ಎಸ್.ನಾಡಗೌಡ ಉಪಸ್ಥಿತಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಇಂದು ನಡೆದ ಪ್ರತಿಭಟನೆ ದೇಶದಲ್ಲಿ ಶಾಂತಿ ಕದಡಲು ಮೋದಿ ಅಮಿತ್ ಶಾ ಜೋಡಿ ಹುನ್ನಾರ ನಡೆಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಮುಗ್ಧ ಜನತೆಯ ಗಮನವನ್ನು ಬೇರೆಡೆ ಸೆಳೆದು ಆರ್ಥಿಕವಾಗಿ ದೇಶವನ್ನು ಸಮಸ್ಯೆಗೆ ಸಿಲುಕಿಸಿರುವ ವೈಫಲ್ಯ ಮುಚ್ಚಿಕೊಳ್ಳಲು ಹೂಡಿದ ತಂತ್ರಗಾರಿಕೆ ಆಗಿದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಕಟುವಾಗಿ ಟೀಕಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಮುತ್ತಾಹಿದಾ ಕೌನ್ಸಿಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ಶನಿವಾರ ನಡೆದ ಕೌನ್ಸಿಲ್ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು, ಡಿಎಸ್‍ಎಸ್ ಮುಖಂಡರ ಪ್ರತಿಭಟನಾ ರ್ಯಾಲಿ ನಂತರ ಮಿನಿ ವಿಧಾನಸೌಧ ಎದುರು ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಕಾಯ್ದೆ ಷಡ್ಯಂತ್ರವೇ ಹೊರತು ಬೇರೇನೂ ಅಲ್ಲ. ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಬಹುಮತ ಇದೆ ಎಂದು ಮನಸ್ಸಿಗೆ ತೋಚಿದ ತೀರ್ಮಾನ ಕೈಕೊಳ್ಳುತ್ತಿರುವುದು ಸರಿ ಅಲ್ಲ. ಮನಮೋಹನಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಡಾಲರ್ ಮೌಲ್ಯ 40ರೂ ಇತ್ತು. ಅದೀಗ 70ರೂ ದಾಟಿದೆ. ಇದೆಲ್ಲ ವೋಟ್‍ಬ್ಯಾಂಕ್ ರಾಜಕಾರಣ. ಬಿಜೆಪಿಯವರು ದೇಶವನ್ನು ಧರ್ಮ ಆಧಾರದಲ್ಲಿ ವಿಭಜಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಎಂಎಂಸಿ ಅಧ್ಯಕ್ಷ ಡಿ.ಎಂ.ಚೌದ್ರಿ, ಎಪಿಎಂಸಿ ನಿರ್ದೇಶಕ ವೈ.ಎಚ್.ವಿಜಯಕರ್, ಡಿಎಸ್‍ಎಸ್ ಮುಖಂಡ ಹರೀಶ ನಾಟಿಕಾರ, ಡಾ.ಎ.ಎಂ.ಮುಲ್ಲಾ, ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ರಸೂಲ್ ದೇಸಾಯಿ ಕಾಯ್ದೆ ವಿರೋಧಿಸಿ ಮಾತನಾಡಿದರು. ಇದೇ ವೇಳೆ ಕಾಯ್ದೆ ವಿರೋಧಿಸಿ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಎಂಎಂಸಿ ಕಾರ್ಯದರ್ಶಿ ಎನ್.ಬಿ.ಮುದ್ನಾಳ ವಕೀಲರು ಓದಿ ತಹಸೀಲ್ದಾರ್‍ಗೆ ಸಲ್ಲಿಸಿದರು.

ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತಪ್ಪ ನಾವದಗಿ, ಡಿಎಸ್‍ಎಸ್ ಮುಖಂಡ ಸಿ.ಜಿ.ವಿಜಯಕರ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ, ಉಪಾಧ್ಯಕ್ಷ ಅಬ್ದುಲ್‍ಜಬ್ಬಾರ್ ಗೋಲಂದಾಜ, ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‍ಗಫೂರ ಮಕಾನದಾರ, ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಪುರಸಭೆ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮಹಿಬೂಬ ಗೊಳಸಂಗಿ, ಪ್ರಮುಖರಾದ ಅಯ್ಯೂಬ ಮನಿಯಾರ, ಹಾಜಿಸಾಬ ತೆಗ್ಗಿ, ನೂರ್‍ಎಹುಸೇನ್ ನದಾಫ, ಅರ್ಷದ್‍ಹುಸೇನ ಮೋಮಿನ್, ಲಾಳೇಮಶ್ಯಾಕ ನಾಯ್ಕೋಡಿ, ದಾವಲಸಾಬ ಸಂಕನಾಳ, ಮಹಿಬೂಬ ಹಳ್ಳಿ, ಡಿ.ಡಿ.ಬಾಗವಾನ, ಪುರಸಭೆ ಮಾಜಿ ಸದಸ್ಯರಾದ ಪಿಂಟೂ ಸಾಲಿಮನಿ, ಕಾಮರಾಜ ಬಿರಾದಾರ, ಗೋಪಿ ಮಡಿವಾಳರ, ಕಾಂಗ್ರೆಸ್, ಬಿಎಸ್ಪಿ, ಡಿಎಸ್‍ಎಸ್ ಮುಖಂಡರು, ಕೌನ್ಸಿಲ್ ಕಾರ್ಯಕರ್ತರು, ನಾಡಗೌಡರ ಅಭಿಮಾನಿಗಳು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

ಮುದ್ದೇಬಿಹಾಳ ಪಟ್ಟಣದ ಕಿಲ್ಲಾದಲ್ಲಿರುವ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡ ರ್ಯಾಲಿ ವಿವಿಧ ರಸ್ತೆ, ವೃತ್ತಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದಲ್ಲಿ ಮುಕ್ತಯಗೊಂಡಿತು. ರ್ಯಾಲಿಯಲ್ಲಿ ಯುವಕರು ಡಾ.ಅಂಬೇಡ್ಕರ್, ಮೌಲಾನಾ ಅಬುಲ್‍ಕಲಾಮ್ ಆಜಾದ್, ಹುತಾತ್ಮ ಅಶ್ರಫ್‍ಉಲ್ಲಾ ಖಾನ್ ವೇಷಧಾರಿಗಳಾಗಿ ಗಮನಸೆಳೆದರು. ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‍ಶಾ ಮತ್ತು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ಆನಂದ ವಾಗಮೋರೆ, ಪಿಎಸೈ ಮಲ್ಲಪ್ಪ ಮಡ್ಡಿ ಉಸ್ತುವಾರಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಪೊಲೀಸರಿಂದ ಬಿಗಿ ಬಂದುಬಸ್ತ ಮಾಡಿದ್ದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started