ಏಕಕಾಲಕ್ಕೆ ಎಂಟು ಪುಸ್ತಕ ಬಿಡುಗಡೆ ವಿಶ್ವದಾಖಲೆ ನಿರ್ಮಿಸಿದ ಸಾಹಿತಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಾವೂರ ಗ್ರಾಮದ ಶಿಕ್ಷಕರು ಹಾಗೂ ಸಾಹಿತಿಗಳಾದ ಶಿವಕುಮಾರ್ ಹಡಪದ ರವರು 8 ಪುಸ್ತಕಗಳನ್ನು ಏಕಕಾಲಕ್ಕೆ ಕನ್ನಡ ಭಾಷೆಯಲ್ಲಿ ಬಿಡುಗಡೆಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಡಿಸೆಂಬರ್ 2 ನೇ ತಾರೀಕು 2018ರಂದು ಶ್ರೀ ಶಿವಕುಮಾರ್ ಹಡಪದ ರವರು 8 ಪುಸ್ತಕಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿ ಇನ್ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್ಸ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.ಈ ದಾಖಲೆಯನ್ನು ಸಂಪಾದಕರಾದ ದೀಪಕ್ ಶರ್ಮಾರವರು ಆದೇಶಿಸಿದ್ದಾರೆ. ಶಿವಕುಮಾರ್ ಅವರು ಎಂಟು ಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸಿದ್ದು ಅವುಗಳು ಈಕೆಳಗಿನಂತಿವೆ.

  • ಶಬ್ದಮಣಿಹಾರ,

  • ವಚನವಾರಿಧಿ,

  • ಭಾವತರಂಗ,

  • ನೆಲಮುಗಿಲು,

  • ವಿದ್ಯಾರ್ಥಿ ಮಿತ್ರ,

  • ಗೀತಲಹರಿ,

  • ದಾರಿದೀಪ,

  • ಭಾವಗಾಯನ

ಎಂದು ಪ್ರಪ್ರಥಮ ಬಾರಿಗೆ ಎಂಟು ಕನ್ನಡ ಪುಸ್ತಕಗಳನ್ನು ಬಿಡುಗಡೆಗೊಳಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started